ಹುಬ್ಬಳ್ಳಿ- ಸ್ವರ್ಣಾ ಗ್ರೂಪ್ ಆಫ್ ಕಂಪನಿ ಹಾಗೂ ಬಿ.ಡಿ.ಕೆ ಫೌಂಡೇಶನ್ ಸಂಯೋಗದೊಂದಿಗೆ ಹುಬ್ಬಳ್ಳಿಯ ಶಿರೂರ ಲೇ ಔಟ್ ಬಾಣಜಿ ಮೈದಾನದಲ್ಲಿಂದು, ಅಂಡರ್ 14 ಆ್ಯಂಡ್ ಅಂಡರ್ 16 ಹುಬ್ಬಳ್ಳಿ ಪ್ರೀಮಿಯರ್ ಜ್ಯೂನಿಯರ್ ಟ್ರೋಫಿ ಕ್ರಿಕೆಟ್ ಫೈನಲ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿ ಧಾರವಾಡ, ಹಾವೇರಿ ಗದಗ ಉತ್ತರಕನ್ನಡ ಜಿಲ್ಲೆಯಿಂದ ಕ್ರೀಡಾಪಟುಗಳು ಆಗಮಸಿ, ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು, ಇವೊಂದು ಪಂದ್ಯಾವಳಿಯಲ್ಲಿ ಎಂಟು ತಂಡಗಳ ಪೈಕಿ, ಇಂದು ಫೈನಲ್ ಪಂದ್ಯದಲ್ಲಿ ವಿ.ವಿ,ಸೂಪರ್ ಕಿಂಗ್ ತಂಡ ಟ್ರೋಫಿ ಗೆದ್ದು ಇತಿಹಾಸ ಸೃಷ್ಟಿಸಿತು. ಎಸ್.ಆರ್ ಎಮ್ಪಿಂಕ್ ಪ್ಯಾಂಥರ್ಸ್ ರನ್ನರ್ ಆಫ ಆಗಿ ಹೊರಹೊಮ್ಮಿತು, ಇನ್ನೂ ಪಂದ್ಯಾವಳಿಗೆ ಸ್ಪಾನ್ಸರ್ ಮಾಡಿದ, ಸ್ವರ್ಣಾ ಗ್ರೂಪ್ ಆಫ್ ಕಂಪನಿ ಮುಖ್ಯಸ್ಥ ಡಾ. ವಿ.ಎಸ್.ವಿ ಪ್ರಸಾದ್ ಮಾತಾನಾಡಿ, ಇವೊಂದು ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಂಡಿರುವ ಕಾರಣ ಉತ್ತರ ಕರ್ನಾಟಕ ಭಾಗದ ಕ್ರೀಡಾಪಟುಗಳ ಪ್ರತಿಭೆಯನ್ನು ರಾಜ್ಯಮಟ್ಟದಲ್ಲಿ ಗುರುತಿಸಿ, ಅವರಿಗೆ ಮುಂದಿನ ದಿನಗಳಲ್ಲಿ ಅವರು ಸಹ ಐಪಿಎಲ್ ನಲ್ಲಿ ಆಡಲಿ ಎಂಬ ಉದ್ದೇಶದಿಂದ ಆಯೋಜನೆ ಮಾಡಿರುವುದಾಗಿ ತಿಳಿಸಿದ್ದಾರೆ.
Kshetra Samachara
19/12/2021 08:08 pm