ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: 120 ಪದಕಗಳನ್ನು ಬಾಚಿಕೊಂಡ ಸ್ಕೇಟಿಂಗ್ ಕಿಲಾಡಿಗಳು

ಫೆಬ್ರವರಿ 14 ರಂದು ಧಾರವಾಡ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ನಡೆದ ಧಾರವಾಡ ಜಿಲ್ಲಾ ಮಟ್ಟದ ಸ್ಕೇಟಿಂಗ್ ಪಂದ್ಯಾವಳಿ ಹಾಗು ರಾಜ್ಯ ಮಟ್ಟದ ಆಯ್ಕೆ ಪ್ರಕ್ರಿಯೆ 2020-21 ರಲ್ಲಿ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿಯ 69 ಮಕ್ಕಳು ಭಾಗವಹಿಸಿ ಒಟ್ಟು 120 ಪದಕಗಳನ್ನು ಬಾಚಿಕೊಂಡಿದ್ದಾರೆ. ಕ್ವಾಡ್ ವಿಭಾಗದಲ್ಲಿ 54, ಸ್ಪೀಡ್ ಇನ್ ಲೈನ್ ವಿಭಾಗದಲ್ಲಿ 27, ಬೇಸಿಕ್ ಇನ್ ಲೈನ್ ವಿಭಾಗದಲ್ಲಿ 39 ಪದಕಗಳನ್ನು ಪಡೆದಿದ್ದಾರೆ. 55 ಬಂಗಾರದ ಪದಕಗಳ ನ್ನು,37 ರಜತ ಪದಕಗಳನ್ನು, 28 ಕಂಚಿನ ಪದಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಪಂದ್ಯಾವಳಿಯಲ್ಲಿ ಒಟ್ಟು 24 ಮಕ್ಕಳು ಮಾರ್ಚ್ 4 ರಿಂದ 7ರವರೆಗೆ ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.

ಸ್ಕೇಟಿಂಗ್ ಕೋಚ್ ಅಕ್ಷಯ್ ಸೂರ್ಯವಂಶಿಯವರ ಮಾರ್ಗದರ್ಶನದಲ್ಲಿ ಮಕ್ಕಳು ತರಬೇತಿ ಪಡೆದಿದ್ದು, ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನ ಸದಸ್ಯರು ಮತ್ತು ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

18/02/2021 09:55 pm

Cinque Terre

8.98 K

Cinque Terre

0

ಸಂಬಂಧಿತ ಸುದ್ದಿ