ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ರಕ್ತ ಚೆಲ್ಲಿದ ಇರಾನಿ ಜನ: ಧಾರವಾಡದಲ್ಲಿ ವಿಶಿಷ್ಠವಾಗಿ ಮೊಹರಂ ಆಚರಣೆ

ಧಾರವಾಡ: ಭಾವೈಕ್ಯತೆ ಮತ್ತು ತ್ಯಾಗದ ಪ್ರತೀಕ ಈ ಮೊಹರಂ ಹಬ್ಬ. ಹಸೇನ್ ಹುಸೇನ್ರ ತ್ಯಾಗವನ್ನು ಈ ಹಬ್ಬ ನೆನಪಿಸುತ್ತದೆ. ಅದರಲ್ಲೂ ಧಾರವಾಡದಲ್ಲಿ ನಡೆಯುವ ಈ ವಿಶಿಷ್ಠ ಆಚರಣೆ ಗಮನಸೆಳಯುತ್ತದೆ.

ಹೌದು! ಹಸೇನ್, ಹುಸೇನ್ ರ ತ್ಯಾಗವನ್ನು ನೆನಪಿಸುವುದಕ್ಕೋಸ್ಕರ ಧಾರವಾಡದ ಇರಾನಿ ಸಮುದಾಯದ ಜನ ತಮ್ಮ ರಕ್ತವನ್ನೇ ಚೆಲ್ಲುತ್ತಾರೆ. ಪ್ರತಿವರ್ಷ ಮೊಹರಂ ಹಬ್ಬದಂದು ಇವರು ತಮ್ಮ ಎದೆಗೆ ಬ್ಲೇಡ್ ನಿಂದ ಹೊಡೆದುಕೊಳ್ಳುವ ಮೂಲಕ ರಕ್ತ ಚೆಲ್ಲಿ ಮೊಹರಂ ಹಬ್ಬವನ್ನು ಆಚರಿಸಿ, ತ್ಯಾಗದ ಸಂದೇಶ ಸಾರುತ್ತಾರೆ. ಈ ಪ್ರಕ್ರಿಯೆಗೆ ಮಾತಮ್ ಎಂದು ಕರೆಯುತ್ತಾರೆ.

ಮಂಗಳವಾರ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಇರಾನಿ ಸಮುದಾಯದ ಜನ ಜನ್ನತನಗರದಿಂದ ಹೊಸಯಲ್ಲಾಪುರದವರೆಗೆ ಪಾಂಜಾಗಳ ಮೆರವಣಿಗೆ ಮಾಡಿದರು. ಈ ಮೆರವಣಿಗೆಯಲ್ಲಿ ಇವರು ಬ್ಲೇಡ್ನಿಂದ ತಮ್ಮ ಎದೆಗೆ ಹೊಡೆದುಕೊಂಡು ರಕ್ತ ಚೆಲ್ಲುವ ಮೂಲಕ ಮಾತಮ್ ಆಚರಿಸಿದರು.

Edited By :
Kshetra Samachara

Kshetra Samachara

09/08/2022 08:13 pm

Cinque Terre

78.04 K

Cinque Terre

0

ಸಂಬಂಧಿತ ಸುದ್ದಿ