ಹುಬ್ಬಳ್ಳಿ : ಭಾರತೀಯ ಭವ್ಯ ಪರಂಪರೆ, ಧರ್ಮ ಉಳಿಸಿ ಬೆಳೆಸುವ ಮತ್ತು ಮಾನವ ಕಲ್ಯಾಣ ಹಾಗೂ ಆತ್ಮಬಲ ವೃದ್ದಿಯ ಸಂಕಲ್ಪ ಮಾಡುವ ಹಿನ್ನಲೆಯಲ್ಲಿ , ಜುಲೈ 2 ಮತ್ತು 3 ರಂದು ಪರಂಪರೆ ಪುನರ್ ಮನನ ಧರ್ಮಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಭರದ ಸಿದ್ದತೆ ನಡೆದಿದೆ.
ಹೌದು,,, ಹುಬ್ಬಳ್ಳಿಯ ಗೋಕುಲ ರಸ್ತೆಯ ಕೋಟಿಲಿಂಗ ನಗರದ ಶ್ರೀ ರಾಜೇಶ್ವರಿ ಸಭಾಭವನದಲ್ಲಿ, ಶ್ರೀಮದ್ ರಂಭಾಪುರೀ ಜಗದ್ಗುರುಗಳು ಹಾಗೂ ಕೇದಾರ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಬೃಹತ್ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಜಯಪ್ರಿಯ ಕಣ್ಣಿನ ಆಸ್ಪತ್ರೆ ಮತ್ತು ಜಯಪ್ರೀಯ ಮೆಡಿಕಲ್ ಫೌಂಡೇಶನ್ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರ, ಹಾಗೂ ಮಧ್ಯಾಹ್ನ 3.30 ಕ್ಕೆ ಶೋಭಾ ಯಾತ್ರೆ ನಡೆಯಲಿದೆ. ಇದು ಗೋಕುಲ ರಸ್ತೆಯ ಬಸವೇಶ್ವರ ದೇವಸ್ಥಾನದಿಂದ ಕೋಟಿಲಿಂಗ ನಗರದ ಶ್ರೀರಾಜೇಶ್ವರಿ ಸಮುದಾಯ ಭವನದವರೆಗೆ ಪೂರ್ಣಕುಂಭ ಮತ್ತು ಜಾನಪದ ಕಲಾಮೇಳಗಳೊಂದಿಗೆ ನಡೆಯಲಿದೆ.
ಸಂಜೆ 4.30ಕ್ಕೆ ಧರ್ಮಕಂಕಣ ಧಾರಣೆ, 5.45 ಕ್ಕೆ ಧರ್ಮಧ್ವಜ ವಂದನೆ, 6 ಕ್ಕೆ ಧರ್ಮಸಭೆ ನಡೆಯಲಿದೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಾಳೇಹೊನ್ನೂರಿನ ರಂಭಾಪುರಿ ಶ್ರೀ ವೀರಸಿಂಹಾನಾಧೀಶ್ವರ ಸ್ವಾಮೀಜಿ, ಹಾಗೂ ಶ್ರೀ ಹಿಮವತ್ ಕೇದಾರ ಭೀಮಾಶಂಕರಲಿಂಗ್ ಜಗದ್ಗುರುಗಳುವಹಿಸಲಿದ್ದು, ಮುಕ್ತಿ ಮಂದಿರದ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು, ಶಿರಕೋಳ ಹಿರೇಮಠದ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಅಮ್ಮಿನಭಾವಿಯ ಶ್ರೀ ಅಭಿನವಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಪ್ರಸ್ತಾವಿಕ ನುಡಿಗಳನ್ನು ಡಾ. ಎನ್.ಎ. ಚರಂತಿಮಠ ನಡೆಸಿಕೊಡಲಿದ್ದಾರೆ. ಈ ಧರ್ಮ ಕಾರ್ಯಕ್ರಮಕ್ಕೆ ಸುಮಾರು 3000 ಕ್ಕೂ ಅಧಿಕ ಜನರು ಸೇರಲಿದ್ದಾರಂತೆ.
ಜುಲೈ. 3 ರಂದು ಬೆಳಿಗ್ಗೆ 7 ಘಂಟೆಯಿಂದ ಶ್ರೀ ಹಿಮವತ್ ಕೇದಾರ ಭೀಮಾಶಂಕರ ಜಗದ್ಗುರುಗಳವರ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಜರಗಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದು, ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ, ಮಾಜಿ ಸಂಸದ ಮಂಜುನಾಥ ಕುನ್ನೂರ, ಜಗದೀಶ ಗಡಗುಂಟಿ, ಬಸಯ್ಯ ಹಿರೇಮಠ, ಶಂಕ್ರಣ್ಣ ಮುನವಳ್ಳಿ ಸೇರಿದಂತೆ ಹಲವಾರು ಪಾಲ್ಗೊಳ್ಳಲಿದ್ದಾರೆ...
ಇಷ್ಟೆಲ್ಲಾ ಕಾರ್ಯಕ್ರಮದ ನಿರ್ವಹಣೆಯನ್ನು ಡಾ. ಎನ್ ಎ ಚರಂತಿಮಠ, ಕೃಷ್ಣಾ ಉರಣಕರ್,
ಗಂಗಾಧರಸ್ವಾಮಿ ಹಿರೇಮಠ, ಮಲ್ಲಿಕಾರ್ಜುನ ಕುರಗುಂದ, ಪರಮೇಶ್ವರ ಮುಡ್ಕಿ, ಪಂಚಲಿಂಗಪ್ಪ ಜೆ ಕವಲೂರ್, ಎಸ್ ಆರ್ ಚರಂತಿಮಠ, ಸಿದ್ದಲಿಂಗಪ್ಪ ಕಮಡೊಳ್ಳಿ, ಶಿವಕುಮಾರ್ ಹಿರೇಮಠ. ಇವರು ಸಂಪೂರ್ಣ ಕಾರ್ಯಕ್ರಮದ ನಿರ್ವಹಣೆ ಮಾಡುತ್ತಿದ್ದಾರೆ...
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/06/2022 09:21 pm