ಅಣ್ಣಿಗೇರಿ: ಪಟ್ಟಣದ ಆದಿಕವಿ ಪಂಪನ ಮನೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಲ್ಲಿ ಪುರಸಭೆಯ ಅಧ್ಯಕ್ಷರಾದ ಗಂಗಾ ರಮೇಶ್ ಕರೆಕ್ಟ್ ನವರ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಣ್ಣಿಗೇರಿ ಪಟ್ಟಣದಲ್ಲಿ ಶಾಶ್ವತವಾಗಿ ಸಾಹಿತ್ಯ ಭವನ ನಿರ್ಮಾಣ ಮಾಡಲು ಪುರಸಭೆಯಿಂದ ಸ್ಥಳವನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ರವಿರಾಜ ವರ್ಣೇಕರ್ ವಹಿಸಿಕೊಂಡು ಪಂಪನ ಹುಟ್ಟಿದ ಮನೆಯಲ್ಲಿ ಕನ್ನಡ ಸಂಸ್ಥಾಪನಾ ದಿನಾಚರಣೆಯನ್ನು ಮಾಡುತ್ತಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿರುತ್ತದೆ ಎಂದು ಮಾತನಾಡಿದರು.
ಈ ವೇಳೆ ಡಾಕ್ಟರ್ ಮೋಹನ್, ಎನ್.ಎಸ್. ಮೇಲ್ಮರಿ, ಲಲಿತಾ ಸಲಿಮತ್, ಜಿ ಕೆ ಅಣ್ಣಿಗೇರಿ, ಉಮೇಶ್ ಬಿಲ್ಲದ ನವರ್,ಪಾಂಡುರಂಗ ಓಲೆಕಾರ್, ಬಿ.ವ್ಹಿ. ಅಂಗಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Kshetra Samachara
07/05/2022 10:24 am