ನವಲಗುಂದ : ತಾಲ್ಲೂಕಿನ ಬ್ಯಾಲ್ಯಾಳ ಗ್ರಾಮದ ಆರಾಧ್ಯ ದೈವ ಶ್ರೀ ಕಲ್ಲ್ಮೇಶ್ವರ ಅಜ್ಜನವರಿಗೆ ನಿರಂತರ ಪ್ರತಿ ತಿಂಗಳು ಒಂದೂಂದು ಅಲಂಕಾರದಲ್ಲಿ ಪೂಜೆ ನೆಡೆಯುತ್ತದೆ. ಈ ನಿಮಿತ್ತ ಯುಗಾದಿ ಹಬ್ಬದ ಅಂಗವಾಗಿ ಇಂದು ಅಕ್ಕಿ ಪೂಜೆಯನ್ನು ನೆರವೇರಿದಲಾಯಿತು.
ಹಬ್ಬದ ನಿಮಿತ್ತವಾಗಿ ಸೂರ್ಯನ ಪ್ರಜ್ವಲಿಸುವ ಕಿರಣಗಳು ವರ್ಷಕ್ಕೊಮ್ಮೆ ಅಜ್ಜನವರ ಮುಖಕ್ಕೆ ಬೆಳಕು ನೀಡಿ, ಮಹಾಮಂಗಳಾತಿ ಆಗುವವರೆಗೂ ಬೆಳಕು ನಿಂತು ನಂತರ ನಿಧಾನವಾಗಿ ಸೂರ್ಯ ತನ್ನ ಪಥ ಬದಲಿಸುತ್ತಾನೆ. ವರ್ಷ ವಿಡೀ ಸೂರ್ಯನ ಕಿರಣಗಳು ಗರ್ಭಗುಡಿಯತ್ತ ಸುಳಿಯದೇ ಯುಗಾದಿ ಅಮವಾಸ್ಯೆಯಂದು ಮಾತ್ರ ಶ್ರೀ ಗುರು ಕಲ್ಲ್ಮೇಶ್ವರ ಅಜ್ಜನವರಿಗೆ ಸೂರ್ಯನ ಕಿರಣ ನಮಸ್ಕರಿಸಿ ಹೋಗುವುದು ವಿಶೇಷ.
Kshetra Samachara
01/04/2022 06:39 pm