ಅಣ್ಣಿಗೇರಿ : ಒಣ ಬೇಸಾಯದ ಮಾರ್ಗದ ಬದುಕಿಗೆ ಸಂಜೀವಿನಿಯಾದ ಕೃಷಿಹೊಂಡ ರೈತ ಬೂದಪ್ಪ ಚವಡಿ ಬೇಸಾಯದ ಬಾಳಲ್ಲಿ ಆನಂದದ ಜೊತೆ ವಾರ್ಷಿಕ 4.25 ಲಕ್ಷ ಆದಾಯದ ಸಂಭ್ರಮ ತಂದಿದೆ.
ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ಪ್ರಗತಿಪರ ರೈತ ಬೂದಪ್ಪ ಚವಡಿ, ದೇಶಪಾಂಡೆ ಫೌಂಡೇಶನ್ ಸಹಕಾರ ಕೇಳಿ ತಮ್ಮ 5 ಎಕರೆ ಭೂಮಿಗೆ ಒಳಪಟ್ಟಂತೆ 100×100 ಸುತ್ತಳತೆ ಕೃಷಿಹೊಂಡ ನಿರ್ಮಿಸಿಕೊಂಡು ಮಳೆ ಕಡಿಮೆಯಾದರೂ ನಿರೀಕ್ಷೆಗೆ ತಕ್ಕ ಆದಾಯ ಗಳಿಸಲು ಕೃಷಿಹೊಂಡ ಅವಲಂಬಿಸಿದ್ದಾರೆ.
ಈಗಾಗಲೇ ಕೃಷಿಹೊಂಡ ಆಶ್ರಿತವಾಗಿ ಮುಂಗಾರು ಮೆಣಸಿನಕಾಯಿ, ಹತ್ತಿ, ಹೆಸರು ಬೆಳೆ ಲಾಭ ಪಡೆದು ಹಿಂಗಾರು ಕಡಲೆ, ಗೋಧಿ, ಕುಸುಬೆ ಉತ್ತಮ ಬೆಳೆಯ ಹೊಸ ಆದಾಯದ ಭರವಸೆ ಹೊಂದಿದ್ದಾರೆ.
ಒಟ್ಟಾರೆ ದೇಶಪಾಂಡೆ ಫೌಂಡೇಶನ್ ಸಹಕಾರದ ಕೃಷಿಹೊಂಡ ರೈತಾಪಿ ಬೆಳೆಗಳಿಗೆ ವರವಾಗಿ, ಬದು ನಿರ್ಮಾಣ, ಭೂಮಿ ಸಮತಟ್ಟಿಗೆ ಕೊಡುಗೆಯಾಗಿ, ನೀರಾವರಿ ಆಶ್ರಿತ ಹೊಸ ಬೆಳೆ ಬೆಳೆಯುವ ಪ್ರಯೋಗಕ್ಕೆ ಸಹಕಾರವಾಗಿದೆ.
Kshetra Samachara
16/03/2022 01:35 pm