ನವಲಗುಂದ : ಪಟ್ಟಣದ ನಾಗಲಿಂಗ ಮಠದ ರಸ್ತೆಯಲ್ಲಿರುವ ಅಂಬಾಭವಾನಿ ದೇವಸ್ಥಾನದ 11ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸೋಮವಾರ ಅಭಿಷೇಕ ಹಾಗೂ ಮಹಾ ಮಂಗಳಾರತಿ, ಪ್ರಸಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಅರ್ಚಕರಾದ ಸಂಜಯ್ ಭಟ್ ಜೋಶಿ ತಿಳಿಸಿದರು.
ಹೌದು ಎಸ್ ಎಸ್ ಕೆ ಸಮಾಜ ಹಾಗೂ ಮರಾಠ ಸಮಾಜದ ಸಂಯೋಗದೊಂದಿಗೆ ಅಂಬಾಭವಾನಿ ದೇವಸ್ಥಾನದ 11ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ದಿನಾಂಕ 14-2-2022 ರಂದು ಅಂದರೆ ಸೋಮವಾರ ಬೆಳಿಗ್ಗೆ 6 ರಿಂದ 8:30 ಅಭಿಷೇಕ ಹಾಗೂ 8:30 ನಂತರ ಮಹಾ ಮಂಗಳಾರತಿ, ಪ್ರಸಾದ ಹಮ್ಮಿಕೊಳ್ಳಲಾಗಿದೆ. ಇನ್ನು ಈ ಸಂಧರ್ಭದಲ್ಲಿ ಸರ್ಕಾರದ ಕೋವಿಡ್ ಮಾರ್ಗಸೂಚಿ ಪಾಲಿಸಲಾಗುತ್ತದೆ ಎಂದು ಸಂಜಯ್ ಭಟ್ ಜೋಶಿ ತಿಳಿಸಿದರು.
Kshetra Samachara
13/02/2022 09:55 am