ಕುಂದಗೋಳ: ಪ್ರತಿ ವರ್ಷ ವೈಭವದ ಜಾತ್ರೆ ಸೊಬಗಿನ ಮೂಲಕ ಕುಂದಗೋಳ ತಾಲೂಕಿನ ಎಲ್ಲೆಡೆ ಹೆಸರಾದ ತಾಲೂಕಿನ ಬೆನಕನಹಳ್ಳಿಯಲ್ಲಿನ ಬಲ್ಮುರಿ ಗಣೇಶನ ಜಾತ್ರಾ ಮಹೋತ್ಸವ ಈ ವರ್ಷ ಅತಿ ಸರಳ ಮತ್ತು ಶಾಸ್ತ್ರೋಕ್ತವಾಗಿ ನೆರವೇರಿತು.
ಕೋವಿಡ್ ನಿಯಮಾವಳಿ ಪ್ರಕಾರ ಗಣೇಶನ ಜಾತ್ರೆ ನಡೆದಿದ್ದು, ಬೆಳಿಗ್ಗೆ ಗಣೇಶನ ಮೂರ್ತಿಗೆ ಪಂಚಾಮೃತ ಅಭಿಷೇಕ ಪೂಜೆ ನೆರವೇರಿಸಿ ಜಾತ್ರಾ ನಿಮಿತ್ತವಾಗಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರು ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಬಳಿಕ ಬಲ್ಮುರಿ ಗಣೇಶನ ದೇವಸ್ಥಾನದ ಆವರಣದಲ್ಲಿ ವಿವಿಧ ಮಠಾಧೀಶರಿಂದ ಹೋಮ, ಹವನ, ಯಜ್ಞ ಕಾರ್ಯಕ್ರಮ ನಡೆದರೆ ದೇವಸ್ಥಾನಕ್ಕೆ ಭಕ್ತರು ಆಗಮಿಸಿದ ಭಕ್ತರು ತನ್ನ ಪವಾಡದ ಮೂಲಕ ಹೆಸರಾದ ಗಣೇಶನಿಗೆ ವಿವಿಧ ಬೇಡಿಕೆ ಹಾಗೂ ಹರಕೆ ಸಹ ತೀರಿಸಿದರು.
ಜಾತ್ರಾ ಉತ್ಸವದ ಅಂಗವಾಗಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಿಲಾಗಿತ್ತು, ಈ ವೇಳೆ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಾಯಹಸ್ತ ಕಲ್ಪಿಸಿದ ದಾನಿಗಳಿಗೆ ಸನ್ಮಾನ ಸಮಾರಂಭ ಏರ್ಪಡಿಸಿ ಸನ್ಮಾನಿಸಿದ್ರೆ, ಕೆಲ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆದು ಜನರನ್ನು ರಂಜಿಸಿದವು.
Kshetra Samachara
12/02/2022 08:46 pm