ಹುಬ್ಬಳ್ಳಿ: ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪನೆ ವಿಚಾರವಾಗಿ ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿನ ಪಂಚಮಸಾಲಿ ಸಮಾಜದ ಮುಖಂಡ ನೀಲಕಂಠ ಅಸೂಟಿ ನಿವಾಸದಲ್ಲಿ ಸಭೆ ನಡೆದಿದ್ದು, ಮೂರನೇ ಪೀಠ ಸ್ಥಾಪನೆಗೆ ವಿವಿಧ ಮಠಗಳ ಮಠಾಧೀಶರರು ಸ್ವಾಗತ ಕೋರಿದ್ದಾರೆ.
ಬಂಡಿವಾಡ ವಿರಕ್ತಮಠದ ಶ್ರೀ ರೇವಣಸಿದ್ದೇಶ್ವರ ಮಹಾಸ್ವಾಮಿಗಳು, ಮನಗೂಳಿಯ ಹಿರೇಮಠದ ಶ್ರೀ ಸಂಗನಬಸವ ಮಹಾಸ್ವಾಮಿಗಳು, ಕುಚನೂರಿನ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಭಾಗಿಯಾಗಿದ್ದರು. ಇನ್ನೂ ಮೂರನೇ ಪೀಠ ಅಗತ್ಯವಾಗಿದ್ದು ಸಹಕಾರ ನೀಡಲು ಮನವಿ ಮಾಡಿದ್ದಾರೆ.
ಪಂಚಮಸಾಲಿ ಸಮಾಜದ ರಾಷ್ಟ್ರೀಯ ಘಟಕದ ಮುಖಂಡರಾದ ಪ್ರಭಣ್ಣ ಹುಣಸಿಕಟ್ಟಿ, ಕಲ್ಲಪ್ಪ ಯಲಿವಾಳ, ರಾಜಶೇಖರ ಮೆಣಸಿನಕಾಯಿ ಮುಂತಾದವರು ಉಪಸ್ಥಿತರಿದ್ದರು.
Kshetra Samachara
25/01/2022 04:56 pm