ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮನೆ ಮನೆಗೆ ಪೊಂಗಲ್ ಸಿಹಿ ಹಂಚಿ ಮಕರ ಸಂಕ್ರಾಂತಿ ಆಚರಣೆ

ಹುಬ್ಬಳ್ಳಿ: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಸ್ವೀಟ್ ಪೊಂಗಲ್ ಮಾಡುವ ಮೂಲಕ ಮಹಿಳೆಯರು ಹಬ್ಬವನ್ನು ಆಚರಿಸಿದರು.

ತಮಿಳುನಾಡಿನಲ್ಲಿ ಸಂಕ್ರಾಂತಿ ಹಬ್ಬದಲ್ಲಿ ಸಡಗರ ಸಂಭ್ರಮದಿಂದ ಆಚರಿಸುವ ಪೊಂಗಲ್ ಹಬ್ಬ ಇದಾಗಿದ್ದು, ನಗರದ ಶಂಕರರಾವ್ ಚಾಲ ಫಸ್ಟ್‌ ಕ್ರಾಸ್‌ನಲ್ಲಿ ತಮಿಳಿಯನ್ಸ್ ಸಿಹಿ ಪೊಂಗಲ್ ಮಾಡು ಮೂಲಕ ಮನೆ ಮನೆಗೆ ಸಿಹಿ ಹಂಚುವುದರ ಮೂಲಕ ಆಚರಣೆ ಮಾಡಿದರು.

ಭೋಗಿ, ಸಿಹಿ ಪೊಂಗಲ್, ಸ್ಮಶಾನಕ್ಕೆ ಹೋಗಿ ಹಿರಿಯರಿಗೆ ಪೂಜೆ ಸಲ್ಲಿಸಿ ಕರಿ ಹಬ್ಬ, ಖಾನ ಪೊಂಗಲ್ ಮಾಡುತ್ತಾ ನಾಲ್ಕು ದಿನಗಳ ಕಾಲ ಹಬ್ಬ ಆಚರಿಸುತ್ತಾರೆ. ಇಲ್ಲಿ ಸುಮಾರು 70 ವರ್ಷಗಳಿಂದ ಈ ಹಬ್ಬವನ್ನು ಆಚರಿಸಿಕೊಳ್ಳಿತ್ತಾ ಬಂದಿದ್ದು, ಎಲ್ಲ ಮಹಿಳೆಯರು ಸೇರಿಕೊಂಡು ಪೊಂಗಲ್ ಹಬ್ಬವನ್ನು ಇಂದು ಸಂಭ್ರಮದಿಂದ ಆಚರಿಸಿದರು.

Edited By : Manjunath H D
Kshetra Samachara

Kshetra Samachara

14/01/2022 02:12 pm

Cinque Terre

54.22 K

Cinque Terre

0

ಸಂಬಂಧಿತ ಸುದ್ದಿ