ಅಣ್ಣಿಗೇರಿ; ಅಣ್ಣಿಗೇರಿಯ ಪಟ್ಟಣದಿಂದ ಇಂದು ಮುಂಜಾನೆ ಹುಬ್ಬಳ್ಳಿಯ ಸಿದ್ಧಾರೂಢ ಮಠ ಶ್ರೀ ಶಿವಕುಮಾರ ಸ್ವಾಮಿಗಳನ್ನು ಮಠಕ್ಕೆ ಕರೆತರಲು ಪಟ್ಟಣದ ಗಣ್ಯರು ಹಾಗೂ ಅಣ್ಣಿಗೇರಿ ದಾಸೋಹ ಮಠದ ಭಕ್ತರು ಆಗಮಿಸಿದ್ದರು.
ಅಣ್ಣಿಗೇರಿ ದಾಸೋಹ ಮಠದ ಶ್ರೀಗಳಾದ ಶ್ರೀ ಶಿವಕುಮಾರ ಸ್ವಾಮಿಗಳು ಕೆಲ ತಿಂಗಳ ಹಿಂದೆ ಕೆಲ ಮಠದ ಟ್ರಸ್ಟಿಗಳ ವರ್ತನೆಯಿಂದ ಬೇಸತ್ತು ಮಠದಿಂದ ಹೊರನಡೆದಿದ್ದರು. ಇದರ ಹಿನ್ನೆಲೆಯಲ್ಲಿ ಇಂದು ಶ್ರೀಗಳನ್ನು ಕರೆತರಲು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಮಠಕ್ಕೆ ಸುಮಾರು ಐದರಿಂದ ಆರು ನೂರು ಭಕ್ತರು ಆಗಮಿಸಿದ್ದರು.
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದಲ್ಲಿ ಶಿವಕುಮಾರ ಸ್ವಾಮಿಗಳು ಹಾಗೂ ಕೆಲ ಸ್ವಾಮಿಗಳು ಮತ್ತು ಪಟ್ಟಣದ ಭಕ್ತರ ಸಮ್ಮುಖದಲ್ಲಿ ಪಟ್ಟಣದ ದಾಸೋಹ ಮಠಕ್ಕೆ ವಾಪಸ್ ಆಗುವುದರ ಬಗ್ಗೆ ಚರ್ಚಿಸಲಾಯಿತು. ಬರುವ ದಿನಗಳಲ್ಲಿ ಶ್ರೀಗಳು ಹೇಳಿದ ಹಾಗೆ ಮಠದ ಭಕ್ತರು ನಡೆದುಕೊಂಡು ಹೋಗುತ್ತಾರೆ ಎಂದು ಎಲ್ಲ ಭಕ್ತರ ಪರವಾಗಿ ಪಟ್ಟಣದ ಗಣ್ಯರು ತಿಳಿಸಿ ಮನವೊಲಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣದ ದಾಸೋಹ ಮಠದ ಅಧ್ಯಕ್ಷರನ್ನು ಬದಲಿಸಿ ರಾಜೇಶ್ವರರಾಯ ಬಸವಂತರಾಯ ದೇಸಾಯಿಯವರನ್ನು ಹೊಸ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು ತಿಳಿದಿರುತ್ತದೆ.
Kshetra Samachara
06/01/2022 06:29 pm