ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಭಕ್ತಿ ಪುರುಷನ ಮೇಲೆ ಜನರ ನಂಬಿಕೆ, ಪೂಜೆ ಕಾಂಚಾಣದ ಸೇವೆ

ಕುಂದಗೋಳ : ಪಟ್ಟಣದ ಜನರು ಈ ದೈವಿ ಭಕ್ತಿ, ದೇವರು ಮೇಲೆ ನಂಬಿಕೆ, ತಮ್ಮೂರು ಅಭಿಮಾನ ಎಂಬ ಪ್ರಶ್ನೆ ಬಂದ್ರೆ ಯಾವ ಪರೋಪಕಾರದ ಕೆಲಸಕ್ಕೂ ಸೈ ಎಂದು ಬಿಡ್ತಾರೆ ನೋಡಿ.

ಇಂದು ಕುಂದಗೋಳ ಪಟ್ಟಣದ ಕಾಳಿದಾಸನಗರದ ವೃತ್ತದಲ್ಲಿ ಇಂತಹದೆ ಒಂದು ಘಟನೆ ನಡೆಯಿತು, ವೀರಭದ್ರೇಶ್ವರ ಭಕ್ತಿ ಸಾರುವ ಪುರುಷನೊಬ್ಬ ಆವಿಗೆ ಮುಳ್ಳಿಗೆ ಏರಿ, ತ್ರಿಶೂಲ ಖಡ್ಗ ಹಿಡಿದುಕೊಂಡು ನಿಂತಿದ್ದಾರೆ. ಹೀಗೆ ಈ ಈ ಭಕ್ತಿ ಸಾರುವಂತರು ಆವಿಗೆ ಮುಳ್ಳಿಗೆ ಮೇಲೆ ನಿತ್ತರೆ ಊರಿಗೆ ಆಪತ್ತು, ಅನಾಚಾರ ಎದುರಾಗುವ ಮುನ್ಸೂಚನೆ ಇರುತ್ತದೆ ಎಂಬ ನಂಬಿಕೆ ಅರಿತು ಜನರು ಅವಿಗೆ ಮುಳ್ಳಿಗೆ ಮೇಲೆ ನಿಂತ ಪುರುಷನಿಗೆ ನಾಗರೀಕರೆಲ್ಲರೂ ಸೇರಿ ಹಣ ಹೊಂದಿಸಿ ಆತನ ಜೋಳಿಗೆ ತುಂಬಿ ಮಂತ್ರ ಹೇಳಿ ಪೂಜೆ ಮಾಡಿ ಬೀಳ್ಕೊಟ್ಟರು.

ಅದೇನೆರನಿರಲಿ ಜಗತ್ತು ಇಷ್ಟು ಆಧುನಿಕತೆಯತ್ತ ಬೆಳೆದಿದ್ದರೂ ಆ ಹಣ ಪಡೆದು ಪುರುಷ ವೇಷಗಾರನೋ ? ಭಕ್ತನೋ ? ವೀರಭದ್ರೇಶ್ವರ ದೇವಸ್ಥಾನ ರೂವಾರಿಯೋ ? ಏನು ತಿಳಿಯದೇ ಜನ ತಮ್ಮ ಕೈಲಾದ ಭಕ್ತಿ ನೀಡಿದ್ದಾರೆ. ಆ ಹಣ ಯಾವುದಕ್ಕೆ ಸಲ್ಲುತ್ತದೆ ? ಎಂಬ ಪ್ರಶ್ನೆ ಸಹ ಮಾಡದೆ ಹಣ ನೀಡಿದ್ದಾರೆ.

ಒಟ್ಟಾರೆ ದೇವರ ಮೇಲಿನ ನಂಬಿಕೆ ಅಚಲ, ಅದು ವೇಷಗಾರರ ಸ್ವತ್ತಾಗಿ ಜನರ ಭಕ್ತಿ ಅದಕ್ಕೆ ಗಾಳವಾಗದಿರಲಿ ಎನ್ನುವುದು ಪಬ್ಲಿಕ್ ನೆಕ್ಸ್ಟ್ ಆಶಯ.

Edited By : Manjunath H D
Kshetra Samachara

Kshetra Samachara

11/11/2021 02:39 pm

Cinque Terre

18.24 K

Cinque Terre

1

ಸಂಬಂಧಿತ ಸುದ್ದಿ