ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಭಕ್ತ ಸಂಕುಲಕ್ಕೆ ವರಪ್ರಸಾದ ನೀಡಿದ ದುರ್ಗೆ ಎಲ್ಲೆಡೆ ಧನಾತ್ಮಕ ಚಿಂತನೆ

ಕುಂದಗೋಳ : ನವರಾತ್ರಿ ಅಂಗವಾಗಿ ಸಂಶಿ ಗ್ರಾಮದ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ ದುರ್ಗಾ ಪರಮೇಶ್ವರಿ ದೇವಿ ನವರಾತ್ರಿ ಏಳನೇ ದಿನದ ಇಂದಿನ ಕಾಳರಾತ್ರಿದೇವಿ ವಿಶೇಷ ಪೂಜೆ ಸಂದರ್ಭದಲ್ಲಿ ಹೂ ನೀಡಿ ವರ ಪ್ರಸಾದ ಕರುಣಿಸಿದ ಘಟನೆ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ನಡೆದಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ದುರ್ಗಾಪರಮೇಶ್ವರಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ನವರಾತ್ರಿ ಅಂಗವಾಗಿ ಒಂಬತ್ತು ದಿನ ವಿಭಿನ್ನವಾದ ವಿಶೇಷ ಅಲಂಕಾರದ ಜೊತೆ ಭಕ್ತಾದಿಗಳ ಸಮ್ಮುಖದಲ್ಲಿ ಪೂಜೆ ಏರ್ಪಡುತ್ತದೆ.

ಅದರಂತೆ ಇಂದು ಅರ್ಚಕರು ದೇವಿಗೆ ಪೂಜಾಭಿಷೇಕ ನೆರವೇರಿಸಿ ಅಲಂಕೃತಗೊಳಿಸಿ ಬಿಲ್ವಪತ್ರೆ ಹೂ ಸಮರ್ಪಿಸಿ ಶ್ಲೋಕ ಮಂತ್ರ ಪಠಿಸುತ್ತಾ ಮಹಾಮಂಗಳಾರತಿ ಮಾಡುವ ವೇಳೆ ದೇವಿ ಹೂ ವರ ಪ್ರಸಾದ ನೀಡಿದ್ದಾಳೆ.

ಈ ವರಪ್ರಸಾದ ಬೀಳುವುದನ್ನು ನೋಡಿದ ಭಕ್ತರು ದೇವಿ ಮಹಾತ್ಮೆ ಕೊಂಡಾಡುತ್ತಿದ್ದು ನವರಾತ್ರಿ ಸಂದರ್ಭದಲ್ಲಿ ಜರುಗಿದ ಘಟನೆ ಭಕ್ತ ಸಾಗರದಲ್ಲಿ ಧನಾತ್ಮಕ ಚಿಂತನೆಯನ್ನು ಪ್ರೇರೇಪಿಸಿದೆ.

ವಿಕ್ಷಕರ ವರದಿ

Edited By : Manjunath H D
Kshetra Samachara

Kshetra Samachara

13/10/2021 02:19 pm

Cinque Terre

33.6 K

Cinque Terre

1

ಸಂಬಂಧಿತ ಸುದ್ದಿ