ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಎಕರೆಗೆ 35 ಸಾವಿರ ಬೆಳೆ ಪರಿಹಾರ ಹಾಳಾದ ಮನೆಗೆ 5 ಲಕ್ಷ ಕೊಡಿ

ತಾಲೂಕಿನಾದ್ಯಂತ ಅಪಾರ ಪ್ರಮಾಣದ ಮಳೆಯ ಕಾರಣ ರೈತಾಪಿ ಜನರ ಬೆಳೆ ಹಾಗೂ ಜನಸಾಮಾನ್ಯರು, ಬಡವರ ವಾಸದ ಮನೆ ಹಾಳಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರತಿ ಎಕರೆ ಬೆಳೆ ಹಾನಿಗೆ 35 ಸಾವಿರ ರೂಪಾಯಿ, ಸಂಪೂರ್ಣ ಮನೆ ಬಿದ್ದವರಿಗೆ 5 ಲಕ್ಷ ಪರಿಹಾರ ನೀಡುವಂತೆ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಹಜರತ್'ಅಲಿ ಜೋಡಮನಿ ಆಗ್ರಹಿಸಿದ್ದಾರೆ.

ಅವರು ಕುಂದಗೋಳ ತಾಲೂಕಿನಲ್ಲಾದ ಬೆಳೆ ಹಾನಿ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಉದ್ದೇಶಿಸಿ ಮಾತನಾಡಿ ಜಿಲ್ಲೆಯಲ್ಲಿ ಹಿಂದೂಳಿದ ತಾಲೂಕು ಕುಂದಗೋಳ ಇಲ್ಲಿ ಮಳೆಯ ಪರಿಣಾಮ ಅಪಾರ ನಷ್ಟ ಉಂಟಾಗಿದೆ ಈ ನಷ್ಟಕ್ಕೆ ಶೀಘ್ರ ಪರಿಹಾರ ಅಗತ್ಯವಿದೆ ಎಂದರು.

ಅದರಲ್ಲೂ ರಾಜ್ಯದಲ್ಲೂ ಬಿಜೆಪಿ ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇದ್ದೂ ಅವರು ಮನಸ್ಸು ಮಾಡಿದ್ರೇ ಕೇವಲ 24 ಗಂಟೆಯಲ್ಲಿ ಪರಿಹಾರ ನೀಡಬಹುದು ಎಂದರು. ಶೇಂಗಾ, ಹೆಸರು, ಜೋಳ, ಸೇರಿದಂತೆ ವಿವಿಧ ಬೆಳೆಗಳು ಹಾಳಾಗಿದ್ದು ಪರಿಹಾರ ಶೀಘ್ರದಲ್ಲೇ ಬಿಡುಗಡೆ ಮಾಡಿ ಇಲ್ಲವಾದಲ್ಲಿ ಜೆಡಿಎಸ್ ಪಕ್ಷ ಈ ವಿಷಯವಾಗಿ ಪ್ರತಿಭಟನೆ ಮಾಡಲಿದೆ ಎಂಬ ಎಚ್ಚರಿಕೆ ನೀಡಿದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/09/2022 05:25 pm

Cinque Terre

107.06 K

Cinque Terre

2

ಸಂಬಂಧಿತ ಸುದ್ದಿ