ನವಲಗುಂದ: ಪಟ್ಟಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಆಂಜನೇಯನ ವೃತ ಹಿಡಿದು ಮಹಾಪೂಜೆ ನಡೆಸಿ ಇಂದು ಪಾಲಿಕೆ, ಮೆರವಣಿಗೆ ಮೂಲಕ ಭಕ್ತಾದಿಗಳು ಪಾದಯಾತ್ರೆ ಕೈಗೊಂಡರು.
ಈ ಪಾದಯಾತ್ರೆಯು ಲಾಲಘಡ ಮಾರುತಿ ದೇವಸ್ಥಾನದಿಂದ ಪ್ರಾರಂಭಗೊಂಡು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿ, 14ಕಿಲೋ ಮೀಟರ್ ದೂರದಲ್ಲಿ ಇರುವ ಕಾಲವಾಡ ಗ್ರಾಮದ ಜೋಡ್ ಆಂಜನೇಯ ದೇವಸ್ಥಾನದವರೆಗೂ ನಡೆಯಿತು.
ಹನುಮ ಮಾಲಾಧಾರಿಗಳು ಸೇರಿದಂತೆ ಅನೇಕ ಭಕ್ತರು ಜೈ ಶ್ರೀರಾಮ ಎಂದು ಘೋಷಣೆ ಹಾಕುತ್ತಾ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇನ್ನೂ ಪಾದಯಾತ್ರೆಯಲ್ಲಿ ಬರುವ ಹಳ್ಳಿಗಳಲ್ಲಿ ಭಕ್ತರು ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು.
Kshetra Samachara
14/12/2024 12:22 pm