ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಂಬೇಡ್ಕರ್ ಮೂರ್ತಿಯನ್ನು ಮರು ಪ್ರತಿಷ್ಠಾಪನೆ ಮಾಡಿದ ಪೊಲೀಸರು

ಹುಬ್ಬಳ್ಳಿ: ಏಪ್ರಿಲ್ 14 ರಂದು ದೇಶಾದ್ಯಂತ ಎಲ್ಲಿಲ್ಲದ ಸಡಗರ ಸಂಭ್ರಮ. ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತೋತ್ಸವದ ಅಂಗವಾಗಿ ಸರ್ಕಾರಿ ಕಚೇರಿಯಲ್ಲಿ ಅಭಿಮಾನಿಗಳಿಂದ ಸಂಭ್ರಮಾಚರಣೆ ಮಾಡುತ್ತಿರುವ ವೇಳೆಯಲ್ಲಿ, ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ಗಾಂಧಿವಾಡ ಕಾಲೋನಿಯಲ್ಲಿ ದಲಿತರು ಡಾ.ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಿದ್ದರು. ಆದರೆ ಆರ್.ಪಿ.ಎಫ್ ಪೊಲೀಸರು ಹಾಗೂ ಕೇಶ್ವಾಪೂರ ಪೊಲೀಸರು ಅಂಬೇಡ್ಕರ್ ಅವರ ಮೂರ್ತಿಯನ್ನು ತೆರವುಗೊಳಿಸಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದರು. ನಂತರ ಅಲ್ಲಿನ ಜನರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ಮಾಡಿದ್ದಕ್ಕೆ ಮತ್ತೆ ಅಂಬೇಡ್ಕರ್ ಅವರ ಮೂರ್ತಿಯನ್ನು ಮರಳಿ ಪ್ರತಿಷ್ಟಾಪನೆ ಮಾಡಿದ್ದಾರೆ....

ಆದ್ರೆ ಅಂಬೇಡ್ಕರ್ ಅವರ ಮೂರ್ತಿಯನ್ನು ಮರಳಿ ಪ್ರತಿಷ್ಟಾಪನೆ ಮಾಡಿದ ಅದೇ ಪೊಲೀಸರು ಮತ್ತೆ ಬಂದು, ಇಂದು ಜೆಸಿಬಿಯಿಂದ ತೆರವುಗೊಳಿಸಲು ಮುಂದಾಗಿದ್ದರಿಂದ ಅಲ್ಲಿನ ನಿವಾಸಿಗಳು ಮತ್ತೇ ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದರಲ್ಲಿ ರಾಜಕೀಯ ಕೈವಾಡವಿದೆ. ತೆರವುಗೊಳಿಸಿದ ಮೂರ್ತಿಯನ್ನು ಮತ್ತೇ ಪ್ರತಿಷ್ಟಾಪನೆ ಮಾಡಿ.... ಯಾರೋ ಕಾಣದ ಕೈವಾಡದ ಮಾತು ಕೇಳಿ ಮರಳಿ ತೆರವುಗೊಳಿಸಲು ಬಂದಿದ್ದು ದೇಶದ ನಾಯಕನಿಗೆ ಅವಮಾನ ಮಾಡುತ್ತಿದ್ದಾರೆಂದು ಅಲ್ಲಿನ ಜನರು ಆಕ್ರೋಶ ಹೊರ ಹಾಕಿದರು....

ಒಟ್ಟಿನಲ್ಲಿ ಮರಳಿ ಪ್ರತಿಷ್ಟಾಪನೆ ಮಾಡಿದ ಅಂಬೇಡ್ಕರ್ ಅವರ ಮೂರ್ತಿಯನ್ನು ಯಾರಾದರು ತೆರವುಗೊಳಿಸದರೆ, ಮುಂದಿನ ದಿನದಲ್ಲಿ ಹುಬ್ಬಳ್ಳಿ ಅಷ್ಟೇ ಅಲ್ಲಾ ಇಡೀ ದೇಶ್ಯಾದ್ಯಂತ ದಲಿತರು, ಅಂಬೇಡ್ಕರ್ ಅವರ ಅಭಿಮಾನಿಗಳು ರಸ್ತೆಗಿಳಿದು ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈರಣ್ಣ ವಾಲಿಕಾರ,

ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ

Edited By : Manjunath H D
Kshetra Samachara

Kshetra Samachara

16/04/2022 03:56 pm

Cinque Terre

29.12 K

Cinque Terre

7

ಸಂಬಂಧಿತ ಸುದ್ದಿ