ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕಾನೂನ ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಕೆ.ರಾಮರಾಜನ್ ಅವರನ್ನು ಬೆಂಗಳೂರು ಕಮಾಂಡೆಂಟ್ ಸೆಂಟರ್ ಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಹುಬ್ಬಳ್ಳಿ-ಧಾರವಾಡಕ್ಕೆ ನೂತನ ಪ್ರಭಾರ ಡಿಸಿಪಿಯಾಗಿ ಸಾಹಿಲ್ ಭಾಗ್ಲಾ ಎಂಬುವವರಿಗೆ ಜವಾಬ್ದಾರಿ ವಹಿಸಿ ಆದೇಶಿಸಲಾಗಿದೆ. ಇನ್ನೂ ಮತಾಂತರ ಆರೋಪದ ಕೇಸ್ ಗೆ ಡಿಸಿಪಿ ವರ್ಗಾವಣೆಯಾದರಾ..? ಎಂಬುವಂತ ಅನುಮಾನ ವ್ಯಕ್ತವಾಗುತ್ತಿದೆ.
ಮತಾಂತರಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಹು-ಧಾ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು, ಡಿಸಿಪಿ ವಿರುದ್ಧ ಆರೋಪಿಸಿದ್ದರು. ಖುದ್ದು ಡಿಸಿಪಿಯೇ ಕುಮ್ಮಕ್ಕು ನೀಡಿದ್ದಾರೆಂದು ಆರೋಪಿಸಿ ಪ್ರತಿಭಟಿಸಿದ್ದರು. ಇದಾದ ಕೆಲವು ದಿನಗಳಲ್ಲಿಯೇ ಡಿಸಿಪಿಯಾಗಿದ್ದ ರಾಮರಾಜನ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಡಿಸಿಪಿ ವಿರುದ್ಧ ಆಡಳಿತ ಪಕ್ಷದವರೇ ಹರಿಹಾಯ್ದಿದ್ದರು. ಅದೇ ಕಾರಣಕ್ಕೆ ಡಿಸಿಪಿಯವರನ್ನ ವರ್ಗಾವಣೆ ಮಾಡಲಾಯಿತೇ ಎಂಬುವಂತ ಶಂಕೆ ವ್ಯಕ್ತವಾಗುತ್ತಿದೆ.
Kshetra Samachara
18/11/2021 05:19 pm