ಹುಬ್ಬಳ್ಳಿ: ಇಂದು ಕರ್ನಾಟಕ ಏಕೀಕರಣದ ರೂವಾರಿ ಸರ್ ಸಿದ್ದಪ್ಪ ಕಂಬಳಿಯವರ ಜಯಂತಿಯ ಅಂಗವಾಗಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಗೋಕಾಕ್ ನೇತೃತ್ವದಲ್ಲಿ ಹುಬ್ಬಳ್ಳಿಯ ಚಿಟುಗುಪ್ಪಿ ಆಸ್ಪತ್ರೆ ಮುಂಬಾಗದಲ್ಲಿರುವ ಸರ್ ಸಿದ್ದಪ್ಪ ಕಂಬಳಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ಸರ್ ಸಿದ್ದಪ್ಪ ಕಂಬಳಿಯವರು ಕನ್ನಡದ ಕಟ್ಟಾಳು ಕರ್ನಾಟಕ ಏಕೀಕರಣದ ರೂವಾರಿ, ಅವರ ಕನ್ನಡ ಪ್ರೇಮ ಅಪ್ರತಿಮವಾದದ್ದು, ಬ್ರಿಟಿಷ್ ಮುಂಬೈ ಶಾಸನ ಸಭೆಯಲ್ಲಿ ಶಿಕ್ಷಣ ಸಚಿವರಾಗಿ ಅದ್ವಿತೀಯ ಕೆಲಸ ಮಾಡಿದ ಕೀರ್ತಿ ಕಂಬಳಿಯವರ ಪಾಲಿಗಿದೆ.
ಸಿದ್ದಪ್ಪ ಕಂಬಳಿ ಅವರು ಹುಬ್ಬಳ್ಳಿಯಲ್ಲಿ 11 ಸಪ್ಟೆಂಬರ್ 1882ರಲ್ಲಿ ಜನಿಸಿದರು. ತಂದೆ ತೋಟಪ್ಪ ಕಂಬಳಿ, ತಾಯಿ ಗಂಗವ್ವ, ತಂದೆ ಕಂಬಳಿ ಮಾರುತ್ತಿದ್ದರಿಂದ ‘ಕಂಬಳಿ’ ಅನ್ನೋ ಅಡ್ಡ ಹೆಸರು ಬಂದಿದೆ. ಸರ್ಕಾರಿ ಕೆಲಸ ಸಿಗುತ್ತಿದ್ದರೂ ಅದನ್ನ ಬದಿಗೊತ್ತಿ ಕಂಬಳಿ ಅವರು ಆ ಕಾಲಕ್ಕೆ ಕಾನೂನು ಅಧ್ಯಯನಕ್ಕೆ ಮುಂದಾಗಿ ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸರ್ ಸಿದ್ದಪ್ಪ ಕಂಬಳಿ ಅವರ ಎಂದೆಂದಿಗೂ ಕರುನಾಡಲ್ಲಿ ಅಜರಾಮರ ಆಗಿದ್ದಾರೆ, ಅವರ ಹೋರಾಟ, ಶಿಸ್ತು ಬದ್ಧ ಜೀವನವೇ ನಮ್ಮೆಲ್ಲರಿಗೂ ಆದರ್ಶ ಎಂದು ಯುವಕರಿಗೆ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಗೋಕಾಕ್ ತಿಳಿಸಿದರು. ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಹಲವಾರು ಸದಸ್ಯರು ಉಪಸ್ಥಿತರಿದ್ದರು.
Kshetra Samachara
11/09/2022 06:42 pm