ಹುಬ್ಬಳ್ಳಿ : ನಾವು ನೀವೆಲ್ಲಾ ಒಂದೇ ಎನ್ನುವ ಭಾವೈಕ್ಯತೆ ಸಾರವನ್ನು ಸಾರುವ ಮೂಲಕ ಇತರರಿಗೆ ಮಾದರಿಯಾಗಿದ್ದ ಹುಬ್ಬಳ್ಳಿ ಧಾರವಾಡ ಏಕಾಏಕಿ ಆರಂಭವಾದ ಹಿಜಾಬ್ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಹೌದು ಹುಬ್ಬಳ್ಳಿ ಜೆಸಿ ನಗರದಲ್ಲಿರುವ ವುಮೆನ್ಸ್ ಕಾಲೇಜಿನಲ್ಲಿ ಇಂದು ಬೆಳಗ್ಗೆಯಿಂದ ಆರಂಭವಾದ ಹಿಜಾಬ್ ಗಲಾಟೆಯಿಂದಾಗಿ ಸದ್ಯ ಕಾಲೇಜು ಆಡಳಿತ ಮಂಡಳಿ ಕಾಲೇಜಿಗೆ ರಜೆ ಘೋಷಣೆ ಮಾಡಿದೆ.
ಇನ್ನು ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರಿಗೆ ಕಾಲೇಜಿನಲ್ಲಿ ಎಂಟ್ರಿ ನೀಡದಕ್ಕೆ ವಿದ್ಯಾರ್ಥಿನಿಯರು ಹೋರಾಟ ಆರಂಭಿಸುತ್ತಿದ್ದಂತೆ ಇವರಿಗೆ ಮುಸ್ಲಿಂ ಸಮುದಾಯ ಬೆಂಬಲ ನೀಡಿದೆ.
ಈ ವೇಳೆ ಹೋರಾಟದ ಹಾದಿಯೇ ಬದಲಾಗುವುದನ್ನು ಗಮನಿಸಿದ ಆಡಳಿತ ಮಂಡಳಿ ಕಾಲೇಜಿಗೆ ರಜೆ ಘೋಷಣೆ ಮಾಡಿ ಎಲ್ಲ ವಿದ್ಯಾರ್ಥಿಗಳನ್ನು ಮನೆಗೆ ಕಳಿಸುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/02/2022 12:45 pm