ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಈದ್ಗಾ ಮೈದಾನ ಗೇಟ್ ಕ್ಲೋಸ್; ಜೀವನ ನಡೆಸಲು ಅವಕಾಶ ಕೊಡಿ ಎಂದ ಟ್ಯಾಕ್ಸಿ ಮಾಲೀಕರು

ಹುಬ್ಬಳ್ಳಿ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟ್ಯಾಕ್ಸಿ ವಾಹನಗಳ ನಿಲುಗಡೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ, ಶ್ರೀ ಸಾಯಿ ಟ್ಯಾಕ್ಸಿ ಸ್ಟ್ಯಾಂಡ್ ನ ಸದಸ್ಯರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಶಾಸಕರಾದ ಪ್ರಸಾದ್ ಅಬ್ಬಯ್ಯ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಹೌದು,,, ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಟಾಪನೆ ಮಾಡಿ ಸಧ್ಯ ವಿಸರ್ಜನೆ ಕೂಡ ಮಾಡಿದ್ದಾರೆ. ಆದ್ರೆ ಇನ್ನೂವರೆಗೂ ಅಲ್ಲಿ ಟ್ಯಾಕ್ಸಿ ನಿಲ್ಲಿಸಲು ಅವಕಾಶ ನೀಡಿಲ್ಲ ಎಂದು ನಿನ್ನೆ ದಿನದಂದು ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಬಿತ್ತರಿಸಿತ್ತು. ಸಧ್ಯ ವರದಿ ನೋಡಿದ ಟ್ಯಾಕ್ಸಿ ಸವಾರರು ಇಂದು ಪಾಲಿಕೆ ಮತ್ತು ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಗಣೇಶ ಚತುರ್ಥಿ ಅಂಗವಾಗಿ ಗಣೇಶನ ಪ್ರತಿಷ್ಠಾಪನೆಗೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ 13 ದಿನಗಳವರೆಗೆ ವಾಹನ ಪಾರ್ಕಿಂಗ್ ಮಾಡುವಂತಿಲ್ಲ. ನಂತರ ಅವಕಾಶ ನೀಡಲಾಗುವುದು ಎಂದು ಮಹಾನಗರ ಪಾಲಿಕೆ ಆದೇಶ ನೀಡಿತ್ತು. ಆದ್ರೆ 13 ದಿನಗಳು ಕಳೆದರೂ ಸಹಿತ ಪಾಲಿಕೆಯಿಂದ ವಾಹನ ಪಾರ್ಕಿಂಗ್ ಗೆ ಅವಕಾಶ ನೀಡಿಲ್ಲ ಇದ್ದರಿಂದ ನಮ್ಮ ಕುಟುಂಬ ನಿರ್ವಹಣೆ ತೊಂದರೆಯಾಗಿದೆ ಅಳಲು ತೋಡಿಕೊಂಡರು.

Edited By : Somashekar
Kshetra Samachara

Kshetra Samachara

13/09/2022 05:11 pm

Cinque Terre

41.32 K

Cinque Terre

1

ಸಂಬಂಧಿತ ಸುದ್ದಿ