ಚುನಾವಣೆಗೆ ಮತ ಕೇಳಲು ಬಂದಾಗ ನಾವು ನಿಮ್ಮ ಜೊತೆ ಇದ್ದೇವೆ... ನಿಮಗೆ ಸಮಸ್ಯೆ ಬಂದ್ರೆ ಸ್ವತಃ ನಾನೇ ಬಂದು ಬಗೆಹರಿಸುತ್ತೇನೆ ಎಂದ ಕಾರ್ಪೊರೇಟರ್, ಈಗ ಸಮಸ್ಯೆ ಬಗೆ ಹರಿಸುವುದು ಹೋಗಲಿ, ಪಾಪ ಇಲ್ಲಿನ ಜನರ ಕಷ್ಟವನ್ನ ಕೇಳೋಕು ಅವ್ರಿಗೆ ಸಮಯವಿಲ್ಲ ಅನ್ಸುತ್ತೆ.
ಹೌದು… ವಾರ್ಡ್ ನಂ.68 ವಿರಾಪೂರ ಓಣಿಯ ರುದ್ರದೇವ ಹಕ್ಕಲ ಓಣಿಯ ನಿವಾಸಿಗಳ ಗೋಳು ಯಾರು ಕೇಳ್ತಿಲ್ಲ. ಕುಡಿಯುವ ನೀರಲ್ಲಿ ಚರಂಡಿ ನೀರು ಸೇರಿ ಕಲುಷಿತವಾಗಿ ಮಕ್ಕಳು, ದೊಡ್ಡವರು ಆಸ್ಪತ್ರೆಗೆ ಸೇರಿದ್ದಾರೆ. ದಿನಂಪ್ರತಿ ಚರಂಡಿ ವಾಸನೆ ತಾಳಲಾರದೆ ಇಲ್ಲಿನ ಜನರು ಬೇಸತ್ತು ಹೋಗಿದ್ದಾರೆ. ಈ ಬಗ್ಗೆ ಕಾರ್ಪೊರೇಟರಾದ ನಿರಂಜನಯ್ಯ ಹಿರೇಮಠ ಗಮನಕ್ಕೆ ತಂದ್ರೆ ಬಂದು ದೂರದಿಂದ ನಿಂತು ನೋಡಿ ಸರಿ ಮಾಡಿಸುತ್ತೇನೆಂದು ಹೇಳಿ ಹೋಗ್ತಾರಂತೆ.
ಇನ್ನು ಈ ಬಗ್ಗೆ ಈ ಭಾಗದ ಶಾಸಕ ಪ್ರಸಾದ ಅಬ್ಬಯ್ಯ ಗಮನಕ್ಕೆ ತಂದ ಕೂಡಲೇ, ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಅಧಿಕಾರಿಗಳಿಗೆ ಮತ್ತು ಕಾರ್ಪೊರೇಟರ್ ನಿರಂಜನಯ್ಯ ಹಿರೇಮಠ ಅವರಿಗೆ ಕೂಡಲೇ ಈ ಸಮಸ್ಯೆಯನ್ನು ಬಗೆ ಹರಿಸಿ ಎಂದಿದ್ದರು. ಆದ್ರೆ ಕಾರ್ಪೊರೇಟರ್ ಸಮಸ್ಯೆ ಬಗೆಹರಿಸದ ಕಾರಣ ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿ ಶಾಸಕ ಪ್ರಸಾದ ಅಬ್ಬಯ್ಯ ಅವರ ಮನೆಗೆ ಮುತ್ತಿಗೆ ಹಾಕುತ್ತೇವೆಂದು ಇಲ್ಲಿನ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಏರಿಯಾದಲ್ಲಿ ಹೊಸದಾಗಿ ಸಿಸಿ ರಸ್ತೆ ಮಾಡಿದ್ದಾರೆ. ಆದ್ರೆ ಚರಂಡಿ ಸಮಸ್ಯೆಯನ್ನು ಮೊದಲೇ ಬಗೆಹರಿಸಿದ್ದರೆ ಈ ರೀತಿ ಸಮಸ್ಯೆಗಳು ಎದುರಾಗುತ್ತಿರಲಿಲ್ಲ. ಪಾಲಿಕೆ ಚುನಾವಣೆ ವೇಳೆಯಲ್ಲಿ ನಿರಂಜನಯ್ಯ ಹಿರೇಮಠ ಅವರು, ನಿಮ್ಮ ಮತ ಹಾಕಿ ಆರಿಸಿ ತಂದ್ರೆ ಈ ವಾರ್ಡ್‌ನ ಸಂಪೂರ್ಣ ಸಮಸ್ಯೆಗಳನ್ನು ಬಗೆ ಹರಿಸುತ್ತೇನೆ ಎಂದಿದ್ರು. ಆದ್ರೆ ಸಮಸ್ಯೆ ಬಗೆಹರಿಸುವ ಮೊದಲು ಒಂದ್ಸಲ ಇಲ್ಲಿಗೆ ಭೇಟಿ ಕೊಡಿ ಸಾಹೇಬ್ರೇ..
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/07/2022 01:49 pm