ಹುಬ್ಬಳ್ಳಿ: ನಗರದ ಗೋಕುಲ್ ಬಳಿ ಇರುವ ದೇಶಪಾಂಡೆ ಫೌಂಡೇಶನ್ ಸ್ಕಿಲ್‌ಗೆ ಭೇಟಿ ನೀಡಿದ ಇಂಧನ ಹಾಗೂ ಕನ್ನಡ, ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ. ಸುನೀಲ್ ಕುಮಾರ ಅವರು ಅಲ್ಲಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಅದೇ ರೀತಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಂಗವಾಗಿ, ಹೊಸದಾಗಿ ನೇಮಕಗೊಂಡ ಕಿರಿಯ ಪವರ್‌ಮ್ಯಾನ್‌ಗಳಿಗೆ ಶುಭ ಹಾರೈಸುವ ಕಾರ್ಯಕ್ರಮದಲ್ಲಿ ಭಾಗಿಯಾದ ಸಚಿವ ವಿ. ಸುನೀಲ್‌ಕುಮಾರ ಅವರು, ಕಿರಿಯ ಪವರ್‌ಮ್ಯಾನ್‌ಗಳನ್ನು ಕೆಲವು ವರ್ಷಗಳ ನಂತರ ಚಾಲನೆ ನೀಡಿ ಪಾರದರ್ಶಕ ಆಯ್ಕೆ ಮಾಡಿದರು. ಅವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಕಲಿಕೆ ನಿರಂತರ ಪ್ರಕ್ರಿಯೆ ಯಾರೂ ಪರಿಪೂರ್ಣರಲ್ಲ. ಕೊನೆ ಉಸಿರು ಇರುವವರೆಗೆ ಕಲಿಯುವ ಅವಕಾಶ ಸಮಾಜದಲ್ಲಿದೆ. ಇದು ಸೂಕ್ಷ್ಮಇಲಾಖೆ, ಅಜಾಗರೂಕತೆಯಾದರೆ ಪ್ರಾಣಕ್ಕೆ ಕುತ್ತು. ಇವರಿಗೆ ಸೂಕ್ತ ತರಬೇತಿ ನೀಡಬೇಕು ಅನ್ನೊದು ನಮ್ಮ ಧ್ಯೇಯ.
ಇಲಾಖೆಯಲ್ಲಿ 24 ಗಂಟೆ ಕೆಲಸ ಮಾಡಿ ನಿಮ್ಮ ಬಗ್ಗೆ ದೂರು ಬರದಂತೆ ಗ್ರಾಮದ ಕೆಲಸ ಅಚ್ಚುಕಟ್ಟಾಗಿ ಮಾಡಬೇಕು. ಅದರಿಂದ ಕಂಪನಿಗೆ ಕೀರ್ತಿ ತರಬೇಕು. ಲೈನ್ ಮ್ಯಾನ್‌ಗಳನ್ನ ವರ್ಗಾವಣೆ ಮಾಡಬೇಡಿ ಎಂದು ಜನರೇ ಹೇಳಬೇಕು. ಮಳೆಗಾಲದಲ್ಲಿ ಸಮಸ್ಯೆ ಎದುರಾಗುತ್ತವೆ ಹಾಗಾಗಿ ಅವರಿಗೆ ಪೂರಕ ತರಬೇತಿ ನೀಡಲಾಗಿದೆ. ಇನ್ನು ಹಿರಿಯ ಅಧಿಕಾರಿಗಳಿಗೆ, ಎಂಜಿನಿಯರ್ ಗೆ ತರಬೇತಿ ಸಹ ಅಗತ್ಯವಾಗಿದೆಂದು ಸಲಹೆ ನೀಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/08/2022 03:17 pm