ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ʼಅಗ್ನಿಪಥ್ʼ ಹಿಂಸಾತ್ಮಕ ಹೋರಾಟ ಹಿಂದೆ ಪ್ರತಿಪಕ್ಷ ಪಿತೂರಿ; ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ʼಅಗ್ನಿಪಥ್ʼ ಹಿಂಸಾತ್ಮಕ ಹೋರಾಟದ ಹಿಂದೆ ಪ್ರತಿಪಕ್ಷಗಳ ಪಿತೂರಿ ಇದೆ. ಕೆಲವರು ಈ ಯೋಜನೆ ಬಗ್ಗೆ ತಪ್ಪು ತಿಳುವಳಿಕೆ ಹೊಂದಿದ್ದಾರೆ ಅಂಥವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡ್ತೇವೆ. ಕೆಲವರು ಟೂಲ್ ಕಿಟ್ ಇತ್ಯಾದಿ ಪ್ರಚಾರ ಮಾಡಿ ಜಗತ್ತಿನ ವಿವಿಧೆಡೆ ಅಪಪ್ರಚಾರ ಮಾಡ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿಂದು ಮಾತನಾಡಿದ ಸಚಿವರು, ಜಗತ್ತಿನ ಬೇರೆ ಬೇರೆ ದೇಶಗಳಲ್ಲಿಯೂ ಈ ವ್ಯವಸ್ಥೆ ಜಾರಿಯಲ್ಲಿದೆ. ಈ ಹಿಂದೆಯೂ ಈ ಬಗ್ಗೆ ಅನೇಕ ರೀತಿ ಅಧ್ಯಯನ ಮಾಡಲಾಗಿದೆ. ಸೇನಾಧಿಕಾರಿಗಳು, ಸೇನೆ ತಜ್ಞರು ಯೋಜನೆಗೆ ಸಮ್ಮತಿ ನೀಡಿ ಬೆಂಬಲಿಸಿದ್ದಾರೆ.

ಪ್ರಯೋಗವನ್ನೇ ಮಾಡಬಾರದು ಎನ್ನುವ ದುರುದ್ದೇಶದಿಂದ ಅರಾಜಕತೆ ಸೃಷ್ಟಿ ಮಾಡಲಾಗ್ತಿದೆ ಎಂದರು.

ʼಅಗ್ನಿಪಥ್ʼ ನಲ್ಲಿ ಸಣ್ಣಪುಟ್ಟ ದೋಷಗಳಿದ್ದರೆ ಸರಿಪಡಿಸೋಣ. ಅದನ್ನು ಬಿಟ್ಟು ಹೋರಾಟದ ಹಾದಿ ತುಳಿಯೋದು ಸರಿಯಲ್ಲ. ಯಾವುದೇ ಸಾಧಕ - ಬಾಧಕ ಚರ್ಚಿಸದೆ ಜಾರಿಗೆ ತರೋಕೆ ಮುಂದಾಗಿಲ್ಲ. ಈ ಯೋಜನೆಯಲ್ಲಿ ಸೇವೆಗೆ ಸೇರುವವರಿಗೆ ಮುಂದುವರಿಯಲೂ ಅವಕಾಶ ಇರುತ್ತೆ. ಬೇರೆ ಕಡೆಯೂ ಉದ್ಯೋಗಾವಕಾಶ ಇದೆ.

ಆದರೆ, ಇದನ್ನು ವಿರೋಧಿಸಿ ಹಿಂಸಾತ್ಮಕ ಹೋರಾಟದ ಹಾದಿ ಹಿಡಿದಿರುವುದು ಸರಿಯಲ್ಲ. ಇದರ ಹಿಂದೆ ಪ್ರತಿಪಕ್ಷಗಳ ಷಡ್ಯಂತ್ರವಿದೆ. ಕೇಂದ್ರ ಸರ್ಕಾರ ಏನೇ ಮಾಡಿದರೂ ಕಾಂಗ್ರೆಸ್ ಅದನ್ನು ವಿರೋಧಿಸುತ್ತಲೇ ಬರುತ್ತಿದೆ. ಕಾಂಗ್ರೆಸ್ ಕುಮ್ಮಕ್ಕಿನಿಂದ ಹಲವಾರು ಜನ ಬೀದಿಗೆ ಬಂದಿದ್ದಾರೆ.

ಹೋರಾಟ ಮಾಡ್ತಿರೋರ ಪೈಕಿ ಶೇ.90ರಷ್ಟು ಜನ ಸೇನೆಗೆ ಸೇರೋ ಅರ್ಹತೆಯನ್ನೇ ಹೊಂದಿಲ್ಲ. ಯಾರು ಸೇನೆಗೆ ಸೇರಬೇಕು ಅವರೆಲ್ಲ ಹೋರಾಟ ಮಾಡುತ್ತಿಲ್ಲ. ಹಿಂಸಾತ್ಮಕ ಹೋರಾಟಕ್ಕೆ ಹೇಗೆ ಪ್ರಚೋದನೆ ಸಿಕ್ಕಿದೆ. ಅನ್ನೋದನ್ನ ಮಾಧ್ಯಮಗಳು ಬಿತ್ತರಿಸಿವೆ. ಎಲ್ಲಿಯೂ ಕಮ್ಯುನಿಕೇಶನ್ ಗ್ಯಾಪ್ ಆಗಿಲ್ಲ.

ಅನೇಕ ವರ್ಷಗಳಿಂದ ಇದು ಚರ್ಚೆಯಲ್ಲಿತ್ತು. ಇದೀಗ ಜಾರಿಗೆ ತರಲಾಗ್ತಿದೆ. ಲೋಪದೋಷ ತಿದ್ದುಪಡಿಗೆ ನಾವು ಸಿದ್ಧರಿದ್ದೇವೆ. ಹಾಗೆಂದು ಹಿಂಸೆಯನ್ನು ನಾವು ಸಹಿಸುವುದಿಲ್ಲ. ಹಿಂಸಾತ್ಮಕ ಹೋರಾಟ ವಿರುದ್ಧ ಆಯಾಯ ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳುತ್ತವೆ ಎಂದರು.

Edited By : Somashekar
Kshetra Samachara

Kshetra Samachara

19/06/2022 08:22 pm

Cinque Terre

63.09 K

Cinque Terre

33

ಸಂಬಂಧಿತ ಸುದ್ದಿ