ಅಣ್ಣಿಗೇರಿ: ಕಳೆದೆರಡು ವರ್ಷದಿಂದ ಪಟ್ಟಣದ ಪುರಸಭೆ ಜನಪ್ರತಿನಿಧಿಗಳು ಇಲ್ಲದೆ ಪಟ್ಟಣದ ಅಭಿವೃದ್ಧಿ ಕಾರ್ಯಗಳು ಹಾಗೆ ಉಳಿದಿದ್ದವು, ಕಳೆದ ಡಿಸೆಂಬರ್ ನಲ್ಲಿ ಚುನಾವಣೆ ಯಶಸ್ವಿಯಾಗಿ ಮುಕ್ತಾಯಗೊಂಡು ಕಾಂಗ್ರೆಸ್ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿದರುತ್ತದೆ.
ಕಳೆದ ಹತ್ತು ಹನ್ನೆರಡು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಸದಸ್ಯರು ಅಧ್ಯಕ್ಷ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ ಆಗಿದ್ದರು, ಈ ಹಿನ್ನೆಲೆಯಲ್ಲಿ ಪುರಸಭೆ ಕಚೇರಿಯಲ್ಲಿ ಇಂದು ಮೊದಲ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು.
ಸಭೆಯಲ್ಲಿ 2022-23ನೇ ಸಾಲಿನ ವಾರ್ಷಿಕ ಟೆಂಡರ್ ದರ ಮಂಜೂರು ಹಾಗೂ ಪುರಸಭೆ ನೂತನ ಕಟ್ಟಡಕ್ಕೆ ಜಾಗ ಖರೀದಿ ಹೊಸ ಕಾಯಿಪಲ್ಲೆ ಮಾರುಕಟ್ಟೆ ನಿರ್ಮಾಣ ಹಾಗೂ ಪಟ್ಟಣದ ಅಭಿವೃದ್ಧಿ ಕೆಲಸಗಳ ಕುರಿತು ಮತ್ತು ಅಧ್ಯಕ್ಷರ ಅಪ್ಪಣೆಯ ಮೇರೆಗೆ ಹಲವಾರು ವಿಷಯಗಳನ್ನು ಚರ್ಚಿಸಲಾಯಿತು.
ಇನ್ನೂ ಈ ವೇಳೆ ಪುರಸಭೆಯ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಮುಖ್ಯಾಧಿಕಾರಿ ಕಟಗಿ ಮತ್ತು ಆಡಳಿತ ವರ್ಗ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ನಂದೀಶ್, ಪಬ್ಲಿಕ್ ನೆಕ್ಸ್ಟ್, ಅಣ್ಣಿಗೇರಿ
Kshetra Samachara
25/04/2022 07:02 pm