ಅಳ್ನಾವರ: ಆಕ್ಟೊಬರ್ 2 ಗಾಂಧಿಜಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಪ್ರಯುಕ್ತ ಇಂದು ಅಳ್ನಾವರ ತಾಲೂಕಿನ ತಹಶೀಲ್ದಾರ್ ರಾದ ಮಾಧವ್ ಗಿತ್ತೆ ಪ್ರೋಬೆಷನರಿ ಆದೇಶದ ಮೇರೆಗೆ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಪಟ್ಟಣ ಪಂಚಾಯಿತಿ ಇಂದ ಪೊಲೀಸ್ ಠಾಣೆ ವರೆಗೂ ರಸ್ತೆ,ರಸ್ತೆಯ ಅಕ್ಕ ಪಕ್ಕ ಹಾಗೂ ಬಸ್ ನಿಲ್ದಾಣದ ಆವರಣ ಹೀಗೆ ಪಟ್ಟಣದ ಬಹುಪಾಲು ಭಾಗ ಸ್ವಚ್ಛತೆಗೆ ಸಜ್ಜಾಗಿ ನಿಂತ್ತಿತ್ತು.
ಈ ಸ್ವಚ್ಛತಾ ಅಭಿಯಾನ ನಾಳೆಯು ಮುಂದುವರೆದಿದ್ದು ಈ ಕಾರ್ಯಕ್ರಮ ಕ್ಕೆ ತಹಶೀಲ್ದಾರ್ ಕಾರ್ಯಾಲಯ ಹಾಗೂ ಪಟ್ಟಣ ಪಂಚಾಯಿತಿ ಕಾರ್ಯಾಲಯ ದ ಸಿಬ್ಬಂದಿಗಳು ಭಾಗಿಯಾಗಿದ್ದರು. ಸ್ವಚ್ಛತೆಗೆ ಒತ್ತು ಕೊಟ್ಟು ರಸ್ತೆಯ ಅಕ್ಕ ಪಕ್ಕ ಸ್ವಚ್ಛ ಗೊಳಿಸಿ ಪಟ್ಟಣವನ್ನು ಸುಂದರವಾಗಿ ಕಾಣುವಂತೆ ಮಾಡಿದ್ದು ಗಮನಾರ್ಹ ಸಂಗತಿ.
ಈ ಕಾರ್ಯಕ್ರಮ ದಲ್ಲಿ ತಹಸೀಲ್ದಾರ್ ರಾದ ಮಾಧವ್ ಗಿತ್ತೆ,ಉಪತಹಸೀಲ್ದಾರ್ ರಾದ ಎಂ.ಜಿ.ಪತ್ತಾರ,ಲಕ್ಷ್ಮಣ ಪತ್ತಾರ, ಎಸ್.ಐ.ಜಗಾಪುರ,ತಹಸೀಲ್ದಾರ್ ಆಪ್ತ ಕಾರ್ಯದರ್ಶಿ ಬಾಬು ಬಾಗಲಕೋಟಿ ಹಾಗೂ ಉಪಸ್ಥಿತರಿದ್ದರು.
Kshetra Samachara
01/10/2021 02:58 pm