ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಪಘಾತದಲ್ಲಿ ಮೃತ ಬಾಲಕನ ಮನೆಗೆ ಶಾಸಕ ಅಮೃತ ದೇಸಾಯಿ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ

ತಾಲೂಕಿನ ಬಾಡ ಗ್ರಾಮದ ಬಳಿ ಮೊನ್ನೆಯಷ್ಟೇ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ಮಹೇಶ್ವರ ತೋಟದ ಎಂಬ ಬಾಲಕನ ಮನೆಗೆ ಭೇಟಿ ನೀಡಿದ ಶಾಸಕ ಅಮೃತ ದೇಸಾಯಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದಿಂದ ಬಾಲಕ ಮಹೇಶ್ವರ ಮದುವೆಗೆಂದು ನಿಗದಿ ಗ್ರಾಮಕ್ಕೆ ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಗೋವನಕೊಪ್ಪ ಗ್ರಾಮ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಒಳಪಡುವುದರಿಂದ ಶಾಸಕ ಅಮೃತ ದೇಸಾಯಿ ಸ್ವತಃ ಬಾಲಕನ ಮನೆಗೆ ಭೇಟಿ ನೀಡಿ ಬಾಲಕನ ತಾಯಿಗೆ ಸಾಂತ್ವನ ಹೇಳಿದರು.

ಈಗಾಗಲೇ ಈ ಅಪಘಾತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದ್ದು, ಆ ಪರಿಹಾರವನ್ನು ಶೀಘ್ರವೇ ತಲುಪಿಸುವುದಾಗಿ ಶಾಸಕ ಅಮೃತ ದೇಸಾಯಿ ಭರವಸೆ ನೀಡಿದರು.

Edited By :
Kshetra Samachara

Kshetra Samachara

24/05/2022 06:17 pm

Cinque Terre

84.92 K

Cinque Terre

3

ಸಂಬಂಧಿತ ಸುದ್ದಿ