ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಾಂಗ್ರೆಸ್ ನಾಯಕರು ಮೋದಿ ವಿರೋಧ ಮಾಡುವ ಭರದಲ್ಲಿ ಭಾರತವನ್ನು ಏಕೆ ವಿರೋಧ ಮಾಡುತ್ತಿದ್ದಾರೆ?

ಹುಬ್ಬಳ್ಳಿ: ಪುಲ್ವಾಮಾ ದಾಳಿ ಬಗ್ಗೆ ಈ ಹಿಂದೆ ಮೋದಿ ಮೇಲೆ ಆರೋಪ ಮಾಡುತ್ತಿದ್ದ ಕಾಂಗ್ರೆಸ್, ಇದೀಗ ಪಾಕಿಸ್ಥಾನವೇ ಈ ಬಗ್ಗೆ ಬಹಿರಂಗವಾಗಿ ಒಪ್ಪಿಕೊಂಡಿದೆ. ಇದೀಗ ಕಾಂಗ್ರೆಸ್ ನವರು ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹರಿ ಹಾಯ್ದಿದ್ದಾರೆ.

ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ನಗರದ ಇಂದಿರಾಗಾಜಿನ ಮನೆಯಲ್ಲಿನ ವಾಲ್ಮೀಕಿ ಪುತ್ಥಳಿಗೆ, ನಮನ ಸಲ್ಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಪಾರ್ಲಿಮೆಂಟ್ ನಲ್ಲಿ ಎಲ್ಲವೂ ಬಹಿರಂಗವಾದರೂ ಕಾಂಗ್ರೆಸ್ ನವರು, ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಭಾರತದ ಪರವಾಗಿ ಒಳ್ಳೆಯ ಸುದ್ದಿ ಬಂದರೆ ಕಾಂಗ್ರೆಸ್ ನವರಿಗೆ ಸಂತೋಷ ತರುವುದಿಲ್ಲವೇ? ಮೋದಿಯವರನ್ನು ವಿರೋಧ ಮಾಡುವ ಭರದಲ್ಲಿ ಭಾರತವನ್ನು ಏಕೆ ವಿರೋಧ ಮಾಡುತ್ತಾರೆ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ರಾಹುಲ್ ಗಾಂಧಿ ಪಾಕಿಸ್ಥಾನ ಪರವಾಗಿ ಮಾತನಾಡುವುದನ್ನು ಅವರ ಬಾಲಿಷತನವನ್ನು ತೋರಿಸುತ್ತದೆ. ವೋಟ್ ಗಾಗಿ ಅವರು ಎಷ್ಟರ ಕೀಳು ಮಟ್ಟಿಗೆ ಇಳಿಯುತ್ತಾರೆ ಎಂಬುದು ಕಾಂಗ್ರೇಸ್ ನಾಯಕರು ‌ನಡುವಳಿಕೆ ಸ್ಪಷ್ಟವಾಗುತ್ತೆ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದರು...

Edited By : Manjunath H D
Kshetra Samachara

Kshetra Samachara

31/10/2020 01:09 pm

Cinque Terre

22.12 K

Cinque Terre

1

ಸಂಬಂಧಿತ ಸುದ್ದಿ