ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಚಕ್ಕಡಿ ಏರಿದ ಸಚಿವ ಜೋಶಿ; ಅಮೃತ ಮಹೋತ್ಸವ ಸ್ವಾತಂತ್ರ್ಯ ಜಾಥಾ

ಧಾರವಾಡ: 75ನೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಅಂಗವಾಗಿ ಧಾರವಾಡದ ಕೆಸಿಸಿ ಬ್ಯಾಂಕ್ ವತಿಯಿಂದ ತಿರಂಗಾ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಈ ಜಾಥಾಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದರು. ಅಲ್ಲದೆ, ಚಕ್ಕಡಿ ಏರಿ ಸ್ವಾತಂತ್ರ್ಯ ಸಂಭ್ರಮದ ಮೆರುಗು ಹೆಚ್ಚಿಸಿದರು.

ಕೆಸಿಸಿ ಸರ್ಕಲ್‌ನಿಂದ ಆರಂಭವಾದ ತಿರಂಗಾ ಮೆರವಣಿಗೆ ಧಾರವಾಡದ ಪ್ರಮುಖ ರಸ್ತೆಗಳ ಮೂಲಕ ಹಾದು ಮರಳಿ ಕೆಸಿಸಿ ಬ್ಯಾಂಕ್‌ಗೆ ಬಂದು ಮುಕ್ತಾಯಗೊಂಡಿತು. ಈ ಮೆರವಣಿಗೆಯಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಮೇಯರ್ ಈರೇಶ ಅಂಚಟಗೇರಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Edited By : Somashekar
Kshetra Samachara

Kshetra Samachara

13/08/2022 03:19 pm

Cinque Terre

16.36 K

Cinque Terre

0

ಸಂಬಂಧಿತ ಸುದ್ದಿ