ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅರಣ್ಯ ಶಾಸ್ತ್ರ ಕಲಿತ ವಿದ್ಯಾರ್ಥಿಗಳ ಗೋಳು ಕೇಳುವವರು ಯಾರೂ ಇಲ್ಲವೇ?

ಅವರೆಲ್ಲ ಅರಣ್ಯ ಇಲಾಖೆಯಲ್ಲಿ ಹುದ್ದೆ ಪಡೆದು ಉತ್ತಮ ಕೆಲಸ ಮಾಡಬೇಕೆಂಬ ಕನಸು ಕಂಡಿದ್ರು. ಅದಕ್ಕಾಗಿಯೇ ಕಾಲೇಜು ಪ್ರವೇಶ ಪಡೆದು ತರಬೇತಿ ಪಡೆದಿದ್ದರು. ಆದರೇ ಸರ್ಕಾರದ ನಿರ್ಧಾರ ಅವರ ಕನಸಿಗೆ ತಣ್ಣೀರು ಎರಚಿದ್ದು ಅವರೆಲ್ಲರೂ ಈಗ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

Yes.. ಹೀಗೆ ಮನವಿ ಪತ್ರ ಹಿಡಿದುಕೊಂಡು ನಿಂತಿರುವ ಇವರೆಲ್ಲ ಅರಣ್ಯ ಶಾಸ್ತ್ರ ಪದವೀಧರರು. ಕಾಲೇಜಿನ ಮುಂದೆ ನೂರಾರು ವಿದ್ಯಾರ್ಥಿಗಳು, ನಮಗೆ ಹುದ್ದೆ ನೀಡಬೇಕು ಎಂದು ಅಳಲು ತೊಡಿಕೊಳ್ಳುತ್ತಿದ್ದಾರೆ. ಶಿರಸಿ ಕಾಲೇಜ್ ಆಫ್ ಪಾರೇಸ್ಟರಿ ವಿದ್ಯಾರ್ಥಿಗಳು. ನಾಲ್ಕು ವರ್ಷದ ವೃತ್ತಿಪರ ಕೋರ್ಸ್ ಮುಗಿಸಿ ನೌಕರಿ ಇಲ್ಲದೇ ಪರದಾಡುತ್ತಿದ್ದಾರೆ. ಅರಣ್ಯ ಇಲಾಖೆಯ ಆರ್.ಎಫ್.ಓ ಮತ್ತು ಎಸಿಎಫ್ ಹುದ್ದೆಗಳಿಗೆ ಬಿ.ಎಸ್‌ಸಿ ಅರಣ್ಯಶಾಸ್ತ್ರ ಪದವಿಯನ್ನೇ ಕನಿಷ್ಠ ವಿದ್ಯಾರ್ಹತೆಯನ್ನಾಗಿ ಮಾಡಬೇಕಂತೆ. ಈಗಾಗಲೇ ಸರಕಾರಕ್ಕೆ ಮನವಿ ಮಾಡಿದ್ರೂ ಏನು ಪ್ರಯೋಜನವಾಗಿಲ್ಲವಂತೆ. ಹೀಗಾಗಿ ಲಕ್ಷಾಂತರ ದುಡ್ಡು ಹಾಕಿ ಕಲಿತು ಮುಂದೆ ಮಾಡೋದಾದ್ರೂ ಏನು ಮಾಡೋದು ಎಂಬ ಚಿಂತನೆಯಲ್ಲಿದ್ದಾರೆ.

ವಲಯ ಅರಣ್ಯಾಧಿಕಾರಿ ಹುದ್ದೆಯ ನೇಮಕಾತಿಯಲ್ಲಿ ಅರಣ್ಯ ಪದವೀಧರರಿಗೆ ಇದ್ದ ಮೀಸಲಾತಿಯನ್ನು ಫೆಬ್ರವರಿ 28.2022 ರಂದು ಹೊರಡಿಸಿದ ಗೆಜೆಟ್ ನೋಟಿಫಿಕೇಶನ್ ನಲ್ಲಿ ಶೇ.75 ರಷ್ಟಿದ್ದ ಮೀಸಲಾತಿಯನ್ನು ಶೇ.50 ಕ್ಕೆ ಕಡಿತಗೊಳಿಸಲಾಗಿದೆ. ಪರಿಣಾಮ ಮೊದಲೇ ಕಡಿಮೆ ಉದ್ಯೋಗಾವಕಾಶಗಳನ್ನು ಹೊಂದಿರುವ ಅರಣ್ಯಶಾಸ್ತ್ರ ಪಡೆದುಕೊಂಡವರಿಗೆ ಅನ್ಯಾಯವಾಗಿದೆ. ಇದರಿಂದ ಅರಣ್ಯಶಾಸ್ತ್ರ ಪದವೀಧರರು ನಿರುದ್ಯೋಗಿಗಳಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ರಾಜ್ಯದಲ್ಲಿ ಕೃಷಿ ವಿಜ್ಞಾನ, ತೋಟಗಾರಿಕೆ, ಪಶುವೈದ್ಯಕೀಯ, ರೇಷ್ಮೆ ಕೃಷಿ ಹೈನುಗಾರಿಕೆ, ಮೀನುಗಾರಿಕೆ ಇಲಾಖೆಗಳ ನೇರ ನೇಮಕಾತಿಯಲ್ಲಿ ಅವುಗಳಿಗೆ ಸಂಬಂಧಿಸಿದಂತೆ ಪದವಿಯನ್ನೇ ಕನಿಷ್ಠ ವಿದ್ಯಾರ್ಹತೆಯನ್ನಾಗಿ ಕಡ್ಡಾಯಗೊಳಿಸಲಾಗಿದೆ. ಆದರೆ ಕೃಷಿ ಪದವಿಗಳಂತೆ ಅರಣ್ಯ ಶಾಸ್ತ್ರವು ಕೂಡಾ ಪ್ರತ್ಯೇಕತೆಯನ್ನು ಹೊಂದಿದ್ದರೂ ಸಹಿತ ಅನ್ಯ ಪದವೀಧರರಿಗೆ ಅವಕಾಶ ನೀಡಿ, ಅರಣ್ಯ ಪದವಿ ಪಡೆದುಕೊಂಡವರಿಗೆ ಅನ್ಯಾಯವಾಗುವಂತಾಗಿದೆ. ಕೂಡಲೇ ಸರ್ಕಾರ ಅರಣ್ಯ ಇಲಾಖೆಯ ನೇರ ನೇಮಕಾತಿಯಲ್ಲಿ ಅರಣ್ಯ ಪದವಿಯನ್ನೇ ಕನಿಷ್ಠ ವಿದ್ಯಾರ್ಹತೆಯನ್ನಾಗಿ ಕಡ್ಡಾಯಗೊಳಿಸಬೇಕು. ಇಲ್ಲದೇ ಹೋದಲ್ಲಿ ಉಗ್ರವಾದ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಒಟ್ಟಿನಲ್ಲಿ ಲಕ್ಷಾಂತರ ರೂ. ದುಡ್ಡು ಸುರಿದು ಆರ್.ಎಫ್ ಓ, ಎಸಿಎಫ್, ಅರಣ್ಯಶಾಸ್ತ್ರ ಕಲಿತ ವಿದ್ಯಾರ್ಥಿಗಳು ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ಏನಾ ಆಗಲಿ ಸರಕಾರ ಇಂತಹ ವಿದ್ಯಾರ್ಥಿಗಳಿಗೆ ಸೂಕ್ತ ಭರವಸೆ ಜೊತೆಗೆ ಹುದ್ದೆ ನೀಡಬೇಕು ಎಂಬುದು ಎಲ್ಲರ ಒತ್ತಾಯವಾಗಿದೆ.

ಈರಣ್ಣ ವಾಲಿಕಾರ

ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/04/2022 06:14 pm

Cinque Terre

105.97 K

Cinque Terre

7

ಸಂಬಂಧಿತ ಸುದ್ದಿ