ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡ ಅಲ್ತಾಫ್ ಹಳ್ಳೂರ ಅಸಲಿಯತ್ತು ಬಯಲು: ಪೊಲೀಸ್ ವಾಹನದ ಮೇಲೆ ನಿಂತು ಪ್ರಚೋದನೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಮೊನ್ನೆ‌ ನಡೆದ ಹಳೆ ಹುಬ್ಬಳ್ಳಿ ಗಲಭೆಗೆ ಕಾಂಗ್ರೆಸ್ ಮುಖಂಡನ ಪ್ರಚೋದನೆಯೇ ಕಾರಣ ಎಂಬ ಸತ್ಯವೊಂದು ಬಯಲಿಗೆ ಬಂದಿದ್ದು, ಕಾಂಗ್ರೆಸ್ ಮುಖಂಡನ ಅಸಲಿ ಸತ್ಯ ಬಯಲಾಗಿದೆ.

ಹೌದು.. ಪೊಲೀಸ್ ವಾಹನದ ಮೇಲೆ ಹತ್ತಿ‌ನಿಂತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಗಲಾಟೆಗೆ ಪ್ರಚೋದನೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಮುಖಂಡನ ಪುಂಡಾಟ ವಿಡಿಯೋ ವೈರಲ್ ಆಗಿದೆ. ಸರ್ಕಾರದ ವಾಹನದ ಮೇಲೆ‌ ನಿಂತು‌ ಜನರತ್ತ ಕೈ ಬೀಸುತ್ತಿರುವ ಅಲ್ತಾಫ್ ಹಳ್ಳೂರು, ಗಲಭೆ ಬಳಿಕ ಶಾಂತಿಯ ನಾಟಕವಾಡಿದ. ಆದರೆ ಅಸಲಿಯತ್ತು ಈಗ ಬೆಳಕಿಗೆ ಬಂದಿದೆ.

ಜನರನ್ನು ಕರೆದು ಪೊಲೀಸ್ ವಾಹನದ ಮೇಲೆ ಹತ್ತಿಸಿಕೊಳ್ಳುತ್ತಿರುವ ಅಲ್ತಾಫ್ ಹಳ್ಳೂರು, ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾನೆ. ಕಿಡಗೇಡಿಗಳಿಗೆ ತಿಳಿ ಹೇಳಬೇಕಿದ್ದ ಮುಖಂಡನೇ ಪ್ರಚೋದನೆ ನೀಡಿದ್ದು, ಪ್ರಚೋದನೆಯಿಂದ ಗಲಭೆಕೋರರ ಪುಂಡಾಟ ಉದ್ರೇಕವಾಗಿದೆ. ನಿನ್ನೆ ತಾನೇ ಮೌಲ್ವಿ ಪ್ರಚೋದನೆ ನೀಡುವ ವಿಡಿಯೋ ವೈರಲ್ ಆಗಿತ್ತು. ಅದೇ ವಿಡಿಯೋದಲ್ಲಿಯೇ ಕಾಂಗ್ರೆಸ್ ಮುಖಂಡನ ಮುಖವಾಡ ಬಯಲಾಗಿದೆ.

ಈಗಾಗಲೇ ತಲೆ ಮರೆಸಿಕೊಂಡ ಮೌಲ್ವಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪ್ರಚೋದನೆ ನೀಡಿದ ಕಾಂಗ್ರೆಸ್ ಮುಖಂಡನ ಮೇಲೆ ಇದುವರೆಗೂ ಏಕೆ ಕ್ರಮ ಕೈಗೊಂಡಿಲ್ಲ?. ರಾಜಕೀಯ ಒತ್ತಡದಿಂದ ಕಾಂಗ್ರೆಸ್ ಮುಖಂಡನನ್ನ ಬಂಧಿಸಲು ಪೊಲೀಸರ ಹಿಂದೇಟು ಹಾಕಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/04/2022 09:36 am

Cinque Terre

167.37 K

Cinque Terre

54

ಸಂಬಂಧಿತ ಸುದ್ದಿ