ಪಬ್ಲಿಕ್ ನೆಕ್ಸ್ಟ್ ವಿಶೇಷ: ಈರಣ್ಣ ವಾಲಿಕಾರ
ಶಿಗ್ಗಾಂವ: ಸ್ವಚ್ಛತೆ ಹೆಸರಿನಲ್ಲಿ ಪಿಡಿಓ ಒಬ್ಬ ಸರಕಾರಿ ಖಜಾನೆಯನ್ನೆ ಸ್ವಚ್ಛ ಮಾಡಿದ್ದಾನೆ ಅದೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಕ್ಷೇತ್ರದಲ್ಲೇ. ಲಕ್ಷಾಂತರ ರೂ ಹಗರಣ ನಡೆದಿದ್ದು ಗೊತ್ತಿದ್ದರೂ ಕೂಡ ಮೇಲಾಧಿಕಾರಿಗಳು ಡೋಂಟ್ ಕೇರ್ ಎಂಬಂತೆ ಸುಮ್ಮನಿದ್ದಾರೆ. ಗ್ರಾಮಸ್ಥರು ಈ ಬಗ್ಗೆ ಪ್ರಶ್ನೆ ಮಾಡಿದ್ರೆ ಅಂತವರಿಗೆ ಅಧಿಕಾರಿಗಳೇ ಬೆದರಿಕೆ ಹಾಕ್ತಾರಂತೆ.
ಇದರಿಂದ ಬೇಸತ್ತ ಗ್ರಾಮಸ್ಥರು ಎಲ್ಲ ದಾಖಲೆಗಳೊಂದಿಗೆ ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡು ನ್ಯಾಯ ಕೊಡಿಸಿ ಅಂತ ಮನವಿ ಮಾಡಿಕೊಂಡಿದ್ದಾರೆ. ಇದೆಲ್ಲ ನಡೆದಿದ್ದು ಎಲ್ಲಿ ಅಂತ ಹೇಳ್ತೀವಿ ಈ ವರದಿ ನೋಡಿ
ಹೌದು.. ಹೀಗೆ ಕೈಯಲ್ಲಿ ದಾಖಲೆಗಳನ್ನು ಹಿಡಿದುಕೊಂಡು ನ್ಯಾಯ ಕೇಳುತ್ತಿರುವ ಇವರೆಲ್ಲರೂ ಶಿಗ್ಗಾಂವ ತಾಲ್ಲೂಕಿನ ಕುನ್ನೂರ ಗ್ರಾಮದವರು. ಪಂಚಾಯತಿಗೆ ಸಂಬಂಧಿಸಿದ ಸದಸ್ಯ ಹಾಗೂ ಗ್ರಾಮಸ್ಥರು. ಈ ಪಂಚಾಯತಿ ಪಿಡಿಓ ಪ್ರಕಾಶ ಔಂದಕರ್ ಮಾಡಿದ ಹಗರಣದ ಬಗ್ಗೆ ಸ್ವತಃ ದಾಖಲೆಗಳ ಸಮೇತ ಬಂದಿದ್ದಾರೆ. ಈ ಪಂಚಾಯತಿಗೆ ಮೂರು ಗ್ರಾಮಗಳು ಸೇರುತ್ತವೆ. ಸುಮಾರು 11 ವರ್ಷಗಳಿಂದ ಇದೇ ಗ್ರಾಮ ಪಂಚಾಯತಿಯಲ್ಲಿ ಝಂಡಾ ಊರಿರುವ ಪಿಡಿಓ ಪ್ರಕಾಶ ಔಂದಕರ ಊರು ಸ್ವಚ್ಛ ಮಾಡೋದಾಗಿ ಹೇಳಿ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂಪಾಯಿ ಗುಳುಂ ಮಾಡಿದ್ದಾರೆ ಎಂಬುದು ಗ್ರಾಮಸ್ಥರು ಆರೋಪ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ವಂತ ಕ್ಷೇತ್ರದಲ್ಲೇ ರಾಜಾರೋಷವಾಗಿ ಹಗಲು ದರೋಡೆ ನಡೆದಿದೆ. ಹಗರಣದ ಬಗ್ಗೆ ಈಗಾಗಲೇ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮೂಲಕ ಗ್ರಾಮಸ್ಥರು ಗಮನ ಸೆಳೆದಿದ್ದಾರೆ. ಇದಕ್ಕೆ ಸಿಎಂ ಬೊಮ್ಮಾಯಿ ಅವರು ತನಿಖೆ ನಡೆಸಲು ಸೂಚಿಸಿದ್ದಾರಂತೆ
ಗ್ರಾಮವನ್ನು ಉದ್ಧಾರ ಮಾಡಬೇಕಾಗಿದ್ದ ಅಧಿಕಾರಿಗಳು, ನಕಲಿ ದಾಖಲೆಯನ್ನು ಸೃಷ್ಟಿಸಿ ಗ್ರಾಮಸ್ಥರಿಗೆ ಮೋಸ ಮಾಡಿ ಹಣ ಪೀಕುತ್ತಿದ್ದಾರೆ. ಈ ಹಗರಣಕ್ಕೆ ಮೇಲಾಧಿಕಾರಿಗಳು ಯಾವಾಗ ಫುಲ್ ಸ್ಟಾಪ್ ಹಾಕ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/01/2022 08:07 pm