ನವಲಗುಂದ : ಹೆಸರು ಖರೀದಿ ಕೇಂದ್ರ ತಕ್ಷಣವೇ ಪ್ರಾರಂಭ ಮಾಡಬೇಕು ಹಾಗೂ ಪ್ರತಿ ಕ್ವಿಂಟಾಲಗೆ 8500 ರೂಪಾಯಿ ಖರೀದಿ ನಿಗದಿ ಮಾಡಬೇಕು ಮತ್ತು ತಕ್ಷಣವೇ ಕಳಸ ಬಂಡೂರಿ ಯೋಜನೆಯ ಕೆಲಸ ಪ್ರಾರಂಭಿಸಬೇಕು ಎಂದು ಪಟ್ಟಣದ ರೈತ ಭವನದಲ್ಲಿ ಮಲಪ್ರಭಾ ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟ, ಪಕ್ಷಾತೀತ ಹೋರಾಟ ಸಮಿತಿ ನವಲಗುಂದ ವತಿಯಿಂದ ತಹಶೀಲ್ದಾರ್ ನವೀನ್ ಹುಲ್ಲೂರ್ ರವರ ಮೂಲಕ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ರೈತ ಮುಖಂಡರಾದ ಸುಭಾಷ್ ಚಂದ್ರಗೌಡ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ, ಪಕೀರ ಗೌಡ ವೆಂಕನಗೌಡ, ಯಲ್ಲರೆಡ್ಡಿ ವನಹಳ್ಳಿ, ಮುರಿಗೆಪ್ಪ ಪಲ್ಲೆ, ಸಂಗಪ್ಪ ನಿಡುವಣಿ, ಸಿದ್ದಪ್ಪ ಬಸಾಪುರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Kshetra Samachara
14/08/2021 02:26 pm