ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಂದಿಗಳ ಕಾಟಕ್ಕೆ ಬೇಸತ್ತ ವಿವೇಕಾನಂದ ನಗರದ ಜನರು

ಹುಬ್ಬಳ್ಳಿ: ಸದ್ಯ ಮಳೆಗಾಲ ಆರಂಭಗೊಂಡಿದ್ದು, ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿದೆ. ಎಷ್ಟು ಸ್ವಚ್ಛತೆಯಿಂದ ಇರುತ್ತೆವೋ ಅಷ್ಟು ಆರೋಗ್ಯಕ್ಕೆ ಒಳ್ಳೆಯದು. ಆದರೆ ಹಂದಿಗಳ ಹಾವಳಿಯಿಂದ ಸ್ವಚ್ಛತೆ ಎನ್ನುವುದು ದೂರವಾಗಿದೆ. ಪಾಲಿಕೆ ಸದಸ್ಯ ಹಾಗೂ ಪಾಲಿಕೆ ವಿರುದ್ಧ ವಾರ್ಡ್ ನಂ.30 ರಲ್ಲಿ ಬರುವ ಗೋಕುಲ ರೋಡ್‌ನ ವಿವೇಕಾನಂದ ನಗರದ ಜನ ಫುಲ್ ಗರಂ ಆಗಿದ್ದಾರೆ.

ವಾರ್ಡ್ ನಂ.30 ರಲ್ಲಿ ಬರುವ ಗೋಕುಲ ರೋಡ್‌ನ ವಿವೇಕಾನಂದ ನಗರದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಅಲ್ಲಿನ ಜನರಿಗೆ ಹೆಚ್ಚು ಕಿರಿಕಿರಿ ಆಗುತ್ತಿದೆಯಂತೆ. ಅಷ್ಟೇ ಅಲ್ಲದೆ ಈ ಸಮಸ್ಯೆ ಬಗ್ಗೆ ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ ಅವರಿಗೆ ತಿಳಿಸಿದರು ಕೂಡ ಕ್ಯಾರೆ ಎನ್ನುತ್ತಿಲ್ಲವಂತೆ. ಪಾಲಿಕೆ ಕಂಟ್ರೋಲ್‌ ನಂಬರ್‌ಗೆ ಕರೆ ಮಾಡಿದರೂ ರಿಸೀವ್ ಕೂಡ ಮಾಡುತ್ತಿಲ್ವಂತೆ. ಇಷ್ಟೆಲ್ಲ ಸಮಸ್ಯೆಗಳನ್ನು ಯಾರಿಗೆ ಹೇಳಬೇಕು ಎನ್ನುವುದೇ ಇಲ್ಲಿನ ಜನ ಗೊಂದಲಕ್ಕೆ ಕಾರಣವಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆ ಹರಿಸಬೇಕಿದೆ.

Edited By : PublicNext Desk
Kshetra Samachara

Kshetra Samachara

03/07/2022 11:00 am

Cinque Terre

19.75 K

Cinque Terre

0

ಸಂಬಂಧಿತ ಸುದ್ದಿ