ಕಲಘಟಗಿ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು ತಾಲೂಕ ಘಟಕ ಕಲಘಟಗಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಕಲಘಟಗಿ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾದಿನ ಪಟ್ಟಣದ ಜನತಾ ಇಂಗ್ಲೀಷ್ ಶಾಲೆಯ ಆವರಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಶಾಸಕ ಸಿ.ಎಂ ನಿಂಬಣ್ಣವರ.ಹಾಗೂ ಕ್ಷೇತ್ರಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಶಾಸಕ ಸಿ.ಎಂ ನಿಂಬಣ್ಣವರ ಮಾತನಾಡಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಷಯ. ಸರಕಾರ ಕೂಡ ಇಂದಿನ ದಿನಗಳಲ್ಲಿ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಭಾರತದ ಇತಿಹಾಸ ಕಾಲದಿಂದಲೂ ಸಮಾಜಕ್ಕೆ ಮಹಿಳೆಯರು ಕೊಡುಗೆ ನೀಡಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಕರ ಸಂಘ ದ ಅದ್ಯಕ್ಷ ಎನ್.ಆಯ್ ಚುಳಕಿ.ಕಾರ್ಯಧರ್ಶಿ ರಾಜಶೇಖರ ಹೊನ್ನಾಪೂರ. ಪುಟ್ಟಯ್ಯ ಭಜಂತ್ರಿ. ಶಿವಾನಂದ ಚಿಕನರ್ತಿ.ಕುಮಾರ ಕೆ.ಎಪ್. ಶ್ರೀಧರ ಪಾಟೀಲಕುಲಕರ್ಣಿ .ಶಿಕ್ಷಕ.ಶಿಕ್ಷಕಿಯರು ವಿದ್ಯಾರ್ಥಿಗಳು ಇದ್ದರು.
Kshetra Samachara
13/03/2022 10:46 am