ಶ್ರಾವಣ ಮಾಸ ಬಂದಾಗ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕಾರ್ಯಗಳು ಹೆಚ್ಚಾಗಿ ನಡೆಯುತ್ತವೆ. ಅದೇ ರೀತಿಯಲ್ಲಿ ವಾಣಿಜ್ಯನಗರಿಯಲ್ಲಿಯೂ ಕೂಡ ಸಾಕಷ್ಟು ಧಾರ್ಮಿಕ ಕಾರ್ಯಕ್ರಮಗಳು ಗರಿಗೆದರಿದ್ದು, ರಾಯರ ಆರಾಧನೆ ಕೂಡ ಇದಕ್ಕೆ ಸಾಕ್ಷಿಯಾಗಿದೆ.
ಹೌದು.. ಹುಬ್ಬಳ್ಳಿಯ ವಿದ್ಯಾನಗರ ಬಡಾವಣೆಯಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರದಲ್ಲಿ ಮೂರು ದಿನಗಳ ಗುರು ರಾಘವೇಂದ್ರರ ಆರಾಧನೆ ಮಾಡಲಾಯಿತು.
ಸುಪ್ರಭಾತ, ಭಕ್ತರಿಂದ ರಾಯರ ಸ್ತೋತ್ರದ ಅಷ್ಟೋತ್ತರ ಪಾರಾಯಣ, ಪಂಚಫಲ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರದ ಮೂಲಕ ವಿಶೇಷವಾಗಿ ರಾಯರ ಆರಾಧನೆ ಮಾಡಲಾಯಿತು.
ಇನ್ನೂ ಶ್ರೀ ಗುರು ರಾಘವೇಂದ್ರರಿಗೆ ಬ್ರಾಹ್ಮಣ ಅಲಂಕಾರ ಪೂಜೆ, ನೈವೇದ್ಯ ಹಸ್ತೋದಕ, ಮಹಾಜನರಿಗೆ ಪ್ರಸಾದ ವಿತರಣೆ, ತೊಟ್ಟಿಲು ಸೇವೆ ಹೀಗೆ ಹತ್ತು ಹಲವು ಕಾರ್ಯಕ್ರಮದ ಮೂಲಕ ರಾಘವೇಂದ್ರ ಸ್ವಾಮೀಜಿಯವರ ಆರಾಧನೆ ಮಾಡಲಾಯಿತು. ಆರಾಧನೆಗೆ ಸಾಕಷ್ಟು ಭಕ್ತಸಾಗರವೇ ಹರಿದು ಬಂದಿದ್ದು, ರಾಯರ ಆರಾಧನೆ ಧಾರ್ಮಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.
Kshetra Samachara
13/08/2022 04:07 pm