ಧಾರವಾಡ: ಧಾರವಾಡ ಹೊಯ್ಸಳನಗರದ ಇಸ್ಮಾಯಿಲ್ ಎಂಬುವವರಿಗೆ ಸೇರಿದ ದನ ಕೊಟ್ಟಿಗೆಯಲ್ಲಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಸೆರೆ ಹಿಡಿಯಲಾಗಿದೆ.
ಈ ಹೆಬ್ಬಾವು ಆಹಾರ ಅರಸಿ ಬಂದು ದನದ ಕೊಟ್ಟಿಗೆಯಲ್ಲಿ ಅವಿತು ಕುಳಿತಿತ್ತು. ಇದನ್ನು ನೋಡಿದ ಮಾಲೀಕರು ಕೂಡಲೇ ಸ್ನೇಕ್ ಮಾಸ್ಟರ್ ನಜೀರ್ ಅವರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ನಜೀರ್ ಅವರು ಆ ಹೆಬ್ಬಾವನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟು ಬರುವ ವ್ಯವಸ್ಥೆ ಮಾಡಿದರು.
Kshetra Samachara
07/09/2022 03:10 pm