ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಮನೆಗಳಿಗೆ ನುಗ್ಗಿದ ನೀರು, ಪಡೆಸೂರ ಗ್ರಾಮಸ್ಥರ ಪರದಾಟ

ನವಲಗುಂದ: ನವಲಗುಂದ ಭಾಗದಲ್ಲಿ ಹರಿಯುವ ಬೆಣ್ಣೆ ಹಳ್ಳದ ಅಂಚಿನಲ್ಲಿನ ಗ್ರಾಮಗಳಿಗೆ ಈಗಾಗಲೇ ನೀರು ನುಗ್ಗಿದೆ. ಪರಿಣಾಮ ಜನರು ತತ್ತರಿಸಿದ್ದಾರೆ. ಜನರು ಮನೆಗಳಲ್ಲಿ ನುಗ್ಗಿದ ನೀರನ್ನು ಹೊರ ಹಾಕಲು ಹರಸಾಹಸ ಪಡುವಂತಾಗಿತ್ತು. ಗ್ರಾಮದ ರಸ್ತೆಗಳೆಲ್ಲ ಜಲಾವೃತಗೊಂಡಿದ್ದವು. ಇಂದು ನೀರು ಕಡಿಮೆಯಾಗಿದೆ.

ಮಂಗಳವಾರ ನವಲಗುಂದ ತಾಲ್ಲೂಕಿನ ಪಡೆಸೂರ ಗ್ರಾಮದಲ್ಲಿ ನುಗ್ಗಿದ ಬೆಣ್ಣೆ ಹಳ್ಳದ ನೀರು ಗ್ರಾಮದ ಬೀದಿ ಬೀದಿಗಳಲ್ಲಿ ನುಗ್ಗಿತ್ತು. ಅಷ್ಟೇ ಅಲ್ಲದೆ ಮನೆಗಳಿಗೂ ನುಗ್ಗಿ ರಾದ್ದಾಂತ ಸೃಷ್ಟಿ ಮಾಡಿ, ಜನ ಜೀವನವನ್ನು ಅಸ್ತವ್ಯಸ್ತ ಮಾಡಿ ಹಾಕಿತ್ತು. ಆದರೆ ನೆನ್ನೆ ನುಗ್ಗಿದ ನೀರು ಇದುವರೆಗೂ ಸಹ ತೆಗೆಯಲು ಪರದಾಟ ನಡೆಸುವಂತಹ ದುಸ್ಥಿತಿ ಬಂದಿದೆ.

ಇಂದು ಸಹ ಗ್ರಾಮಸ್ಥರು ಮನೆಗಳಿಗೆ ನುಗ್ಗಿದ ನೀರನ್ನು ಹೊರ ಹಾಕುವ ಕಾರ್ಯದಲ್ಲೇ ಇದ್ದಾರೆ. ಮಂಗಳ ತಲಾಟಿ ಭೇಟಿ ನೀಡಿ, ಸಮೀಕ್ಷೆ ಮಾಡಿದ್ದು, ಇಂದು ಯಮನೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ವೀರೇಶ್ ಗುಡುದುರಮಠ ಭೇಟಿ ನೀಡಲಿದ್ದಾರೆ.

Edited By : Shivu K
Kshetra Samachara

Kshetra Samachara

07/09/2022 01:06 pm

Cinque Terre

14.4 K

Cinque Terre

0

ಸಂಬಂಧಿತ ಸುದ್ದಿ