ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಮಳೆ ಅವಾಂತರ ಜನ ತತ್ತರ,ಎಲ್ಲಿದ್ದಾರೆ ಉಸ್ತುವಾರಿ ಸಚಿವರು?

ಅಣ್ಣಿಗೇರಿ: ಕಳೆದ ಒಂದು ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ವರುಣಾರ್ಭಟಕ್ಕೆ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮದ ಜನರ ಸ್ಥಿತಿ ಹೇಳತೀರದಾಗಿದೆ.

ಹಳ್ಳ ಕೊಳ್ಳಗಳು ರಭಸವಾಗಿ ಹರಿಯುತ್ತಿದ್ದು, ಇದರಿಂದ ಸಾಕಷ್ಟು ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನೀರುಪಾಲಾಗಿ ಕೊಚ್ಚಿ ಹೋಗಿದೆ. ಇಷ್ಟೆಲ್ಲಾ ಸಮಸ್ಯೆಗಳು ಉದ್ಭವಿಸಿದರೂ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಆಚಾರ್ಯ ಹಾಲಪ್ಪ ಅವರು ಜನರ ಕಣ್ಣಿಗೆ ಬೀಳುತ್ತಿಲ್ಲ ಮತ್ತು ಅವರ ಕಷ್ಟಗಳನ್ನು ಕೇಳುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನೂ ತಾಲೂಕಿನಲ್ಲಿ ಆ. ಅಂತ್ಯದವರೆಗೆ 86 ಮನೆಗಳು ಬಿದ್ದು ಸಾರ್ವಜನಿಕರು ಸೂರು ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ಅವಾಂತರಗಳು ಸೃಷ್ಟಿ ಆಗಿದ್ದರು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಆಚಾರ್ಯ ಹಾಲಪ್ಪ ಅವರು ಮಾತ್ರ ಎಲ್ಲಯೂ ಪತ್ತೆನೆ ಇಲ್ಲಾ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಈ ವಿಷಯವಾಗಿ ಮಾಜಿ ಶಾಸಕ ಕೋನರೆಡ್ಡಿ ಪಬ್ಲಿಕ್ ನೆಕ್ಸ್ಟ್ ವರದಿಗಾರರ ಜೊತೆ ಫೋನ್ ಕಾಲ್ ನಲ್ಲಿ ಮಾತನಾಡಿದ್ದಾರೆ.

Edited By : Shivu K
Kshetra Samachara

Kshetra Samachara

04/09/2022 12:30 pm

Cinque Terre

109.45 K

Cinque Terre

13

ಸಂಬಂಧಿತ ಸುದ್ದಿ