ಅಣ್ಣಿಗೇರಿ: ಅಣ್ಣಿಗೇರಿ ತಾಲೂಕಿನ ನಾವಳ್ಳಿ ಗ್ರಾಮದಲ್ಲಿ ಹಳ್ಳದ ಸಮೀಪ ವಿದ್ಯುತ್ ಉತ್ಪಾದಿಸುವ ಫ್ಯಾನ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೂಲಿ ಕೆಲಸಗಾರರಿಗೆ ವಾಸ ಮಾಡಲು ಶೆಡ್ ನಿರ್ಮಿಸಲಾಗಿತ್ತು. ಆದರೆ ಕಳೆದ ನಾಲ್ಕೈದು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ ಬಂದ ಕಾರಣ ಶೆಡ್‌ಗಳು ನೀರಿನ ರಭಸಕ್ಕೆ ಕಿತ್ತು ಹೋಗುತ್ತಿವೆ. ಇನ್ನೂ ಕಾಮಗಾರಿಗೆ ತಂದಿದ್ದ ಕೆಲವೊಂದಿಷ್ಟು ಸಾಮಗ್ರಿಗಳು ಸಹ ನೀರಿನಲ್ಲಿ ಕೊಚ್ಚಿ ಹೋಗಿರುತ್ತದೆ.
ಹಾಗೂ ಹಳ್ಳದ ಸುತ್ತ ಮುತ್ತಲಿನ ನೂರಾರು ಎಕರೆಗಳಲ್ಲಿ ರೈತ ಬೆಳೆದ ಬೆಳೆಗಳೆಲ್ಲಾ ನೀರಿನ ರಭಸಕ್ಕೆ ಕಿತ್ತುಕೊಂಡು ಹೋಗಿರುತ್ತದೆ.ಇನ್ನೂ ಕೆಲ ರೈತರ ಜಮೀನುಗಳಲ್ಲಿ ಬೆಳೆಗಳ ಸಂಪೂರ್ಣ ನೀರಿನಲ್ಲಿ ನಿಂತುಕೊಂಡು ಬೆಳೆಯಲ್ಲ ಸಂಪೂರ್ಣ ಹಾಳಾಗುತ್ತದೆ ಎಂದು ಅಲ್ಲಿನ ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
Kshetra Samachara
02/09/2022 10:51 pm