ನವಲಗುಂದ: ಆತ ಸೈನ್ಯ ಸೇರಬೇಕು ದೇಶ ಸೇವೆ ಮಾಡಬೇಕು ಎಂಬ ಹಂಬಲದಿಂದ ಅದಕ್ಕೇ ಪೂರ್ವಭಾವಿಯಾಗಿ ಎಲ್ಲ ರೀತಿಯಾದ ತಯಾರಿ ಮಾಡಿಕೊಳ್ಳುತ್ತಿದ ಯುವಕನೊಬ್ಬನಿಗೆ ಹಾವು ಕಚ್ಚಿದ ಪರಿಣಾಮ ಕಿಮ್ಸ್ ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ರಾತ್ರಿ ನಡೆದಿದೆ.
ನವಲಗುಂದ ತಾಲೂಕಿನ ಜಾವೂರು ಗ್ರಾಮದ ಬಸವರಾಜ ನಾಯ್ಕರ ಎಂಬ ಯುವಕನೆ ಆರ್ಮಿಗೆ ಸೇರಬೇಕು ಎಂಬ ಹಂಬಲದಿಂದ ಎಲ್ಲ ರೀತಿಯಾಗಿ ತಯಾರಿ ಮಾಡಿಕೊಳ್ಳುತ್ತಿದ್ದ ಅದೇ ರೀತಿ ನಿನ್ನೆ ಸಾಯಂಕಾಲ ರನ್ನಿಂಗ್ ಮಾಡುತ್ತಿದ್ದಾಗ ಗಮನಿಸದೇ ಹಾವಿನ ಮೇಲೆ ಕಾಲಿಟ್ಟಾಗ ಬಸವರಾಜನ ಕಾಲಿಗೆ ಹಾವು ಕಚ್ಚಿದೆ.
ಕೂಡಲೇ ಅಸ್ವಸ್ಥನಾದ ಬಸವರಾಜ ಮನೆಯವರಿಗೆ ಮಾಹಿತಿ ನೀಡಿದ್ದಾನೆ. ತಕ್ಷಣ ಮನೆಯವರು ಬಸವರಾಜನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
Kshetra Samachara
28/07/2022 10:52 am