ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: "ಪರಿಸರ ನಾಶದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ"

ಧಾರವಾಡ: ಇಂದಿನ ದಿನಗಳಲ್ಲಿ ಪರಿಸರ ನಾಶದಿಂದಾಗಿ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ ಎಂದು ಸಾಫಲ್ಯ ಪ್ರತಿಷ್ಠಾನದ ಮೃಣಾಲ ಜೋಶಿ ಮಾಹಿತಿ ನೀಡಿದ್ದಾರೆ.

ಧಾರವಾಡ ಪ್ರಮೀಳಾ ಕೌಶಲ್ಯ ಅಭಿವೃದ್ಧಿ ಸಂಸ್ಥೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಮಲಾಪುರ ಎಪಿಎಂಸಿ ಆವರಣದ ಬಳಿ ಗಿಡಗಳನ್ನು ನೆಟ್ಟ ಬಳಿಕ ಮಾತನಾಡಿದ ಅವರು, "ಪರಿಸರ ಸಂರಕ್ಷಣೆ ಮಾಡುವುದು ನಮ್ಮ- ನಿಮ್ಮೆಲ್ಲರ ಜವಾಬ್ದಾರಿ" ಎಂದರು.

ಅಂಚೆ ಇಲಾಖೆ ಅಧೀಕ್ಷಕಿ ಪಾರ್ವತಿ ಶ್ರೀಧರ ಭಜಂತ್ರಿ, ಸಮಾಜ ಸೇವಕಿ ಮಹಾದೇವಿ ಮನವರ, ಪ್ರಮೀಳಾ ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ಪ್ರಿಯಾ ಖೋದಾನಪುರ, ಸಂಗೀತಾ ಹೂಗಾರ, ಅನುರಾಧಾ ಶೇವಾಳೆ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

05/06/2022 02:42 pm

Cinque Terre

18.01 K

Cinque Terre

2

ಸಂಬಂಧಿತ ಸುದ್ದಿ