ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ವರುಣನ ಪ್ರತಾಪಕ್ಕೆ ಕೋಡಿ ಬಿದ್ದ ಪಶುಪತಿಹಾಳದ ಕೆರೆ: ಮನೆಗೆ ನೀರು ನುಗ್ಗುವ ಆತಂಕದಲ್ಲಿ ಸ್ಥಳೀಯರು

ಕುಂದಗೋಳ : ಎಲ್ಲೆಡೆ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಒಡೆದಿದೆ. ನೀರಿನ ರಭಸಕ್ಕೆ ಕೆರೆಯ ಸುತ್ತುವರಿದ ಪ್ರದೇಶಗಳು ಜಲಾವೃತವಾಗಿದ್ದು, ಗ್ರಾಮದ ಯಲ್ಲವ್ವ ಭೀಮಪ್ಪ ಡೊಳ್ಳಿನ ಎಂಬುವವರ ಮನೆ ಸೇರಿದಂತೆ ಹಲವಾರು ಮನೆಗಳು ಮಳೆಯ ಹೊಡೆತಕ್ಕೆ ಸಿಲುಕಿ ನೆಲಕ್ಕೆ ಅಪ್ಪಳಿಸಿವೆ.

ಇನ್ನೂ ಪಶುಪತಿಹಾಳದ ಪ್ರಮುಖ ರಸ್ತೆ ಮೇಲೆ ರಭಸದಿಂದ ನೀರು ಹರಿಯುತ್ತಿದ್ದು ರಸ್ತೆಗಳು ಜಲಾವೃತವಾಗಿ, ಮನೆಗಳಿಗೆ ನೀರು ನುಗ್ಗುವ ಆತಂಕ ತಲೆದೋರಿದೆ. ಈಗಾಗಲೇ ಹಾನಿಯಾದ ಮನೆಗಳಿಗೆ ಪರಿಹಾರ ಒದಗಿಸುವಂತೆ ಮನವಿ ಮಾಡುತ್ತಿದ್ದಾರೆ. ಮಳೆಯ ಹೊಡೆತಕ್ಕೆ ಕೆರೆಯ ಕೋಡಿ ಬಿದ್ದ ಪರಿಣಾಮ ಕೆರೆ ಪಕ್ಕದ ಜಮೀನುಗಳು ಸಹ ಜಲಾವೃತವಾಗಿದ್ದು ರೈತಾಪಿ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

Edited By : Manjunath H D
Kshetra Samachara

Kshetra Samachara

19/05/2022 07:37 pm

Cinque Terre

27.25 K

Cinque Terre

0

ಸಂಬಂಧಿತ ಸುದ್ದಿ