ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡಕ್ಕೆ ತಂಪೆರೆದ ಮಳೆರಾಯ

ಧಾರವಾಡ: ಮೇ ತಿಂಗಳು ಮುಗಿದು ಇನ್ನೇನು ಜೂನ್ ತಿಂಗಳು ಆರಂಭವಾಗುವ ಹೊತ್ತಿಗೆ ಧಾರವಾಡಕ್ಕೆ ಮುಂಗಾರು ಪ್ರವೇಶ ಮಾಡಿದಂತಾಗಿದೆ.

ಧಾರವಾಡದಲ್ಲಿ ಮಂಗಳವಾರ ಮಧ್ಯಾಹ್ನವೇ ಮಳೆ ಸುರಿದಿದ್ದು, ರೈತಾಪಿ ವರ್ಗಕ್ಕೆ ಹರ್ಷವನ್ನುಂಟು ಮಾಡಿದೆ. ಬೆಳಿಗ್ಗೆಯಿಂದಲೇ ಧಾರವಾಡದಲ್ಲಿ ಝಳದ ವಾತಾವರಣವಿತ್ತು. ಅಲ್ಲದೇ ಮೋಡ ಕವಿದ ವಾತಾವರಣ ಕೂಡ ಇತ್ತು. ಮಧ್ಯಾಹ್ನದ ಹೊತ್ತಿಗೆ ಮಳೆ ಸುರಿಯಬಹುದು ಎಂದುಕೊಂಡವರ ನಿರೀಕ್ಷೆಯನ್ನು ಮಳೆರಾಯ ಹುಸಿ ಮಾಡಲಿಲ್ಲ.

ಮಧ್ಯಾಹ್ನ 1:30ರ ಸುಮಾರಿಗೆ ಧಾರವಾಡದಲ್ಲಿ ಆರಂಭವಾದ ಮಳೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಮೇ ತಿಂಗಳ ಅಂತ್ಯದ ವೇಳೆಗೆ ಮುಂಗಾರು ಧಾರವಾಡ ಜಿಲ್ಲಾ ಪ್ರವೇಶ ಮಾಡಿತು.

Edited By :
Kshetra Samachara

Kshetra Samachara

17/05/2022 02:53 pm

Cinque Terre

19.02 K

Cinque Terre

1

ಸಂಬಂಧಿತ ಸುದ್ದಿ