ಅಳ್ನಾವರ: ನಿನ್ನೆ ಸುರಿದ ರಣಭೀಕರ ಗಾಳಿ-ಮಳೆಗೆ ಅಳ್ನಾವರ ತಾಲೂಕಿನ ಹುಲಿಕೇರಿ, ಕಡಬಗಟ್ಟಿ, ಕಾಶೆನಟ್ಟಿ ಸೇರಿದಂತೆ ಅನೇಕ ಕಡೆ ಭಾರಿ ಪ್ರಮಾಣದ ಹಾನಿ ಉಂಟಾಗಿದೆ.
ನಿನ್ನೆ ಸಂಜೆ ಸುರಿದ ಭೀಕರ ಗಾಳಿ ಮಳೆಗೆ ತಾಲೂಕಿನ ಹಲವು ಕಡೆ ಭಾರಿ ಪ್ರಮಾಣದ ಹಾನಿ ಉಂಟಾಗಿದ್ದು, ಕಾಶೆನಟ್ಟಿ, ಕಡಬಗಟ್ಟಿ, ಹುಲಿಕೇರಿ ಗ್ರಾಮಗಳಲ್ಲಿ ಮನೆಗಳ ಹಂಚು, ಶೀಟು ಹಾರಿ ಹೋಗಿವೆ. ವಿದ್ಯುತ್ ಕಂಬಗಳು ಧರೆಗುರುಳಿವೆ. ಹಲವು ಗ್ರಾಮಗಳು ವಿದ್ಯುತ್ ಸಂಪರ್ಕ ಕಳೆದುಕೊಂಡಿವೆ. ಬೃಹತ್ ಮರಗಳೆಲ್ಲ ನೆಲಕ್ಕೆ ಬಿದ್ದು ರಸ್ತೆ ಸಂಪರ್ಕ ಕಳೆದುಕೊಂಡಿವೆ.
ನಿನ್ನೆ ಸಂಜೆ ಗುಡುಗು ಮಿಂಚು ಸಹಿತ ಮಳೆಗೆ ಭಾರಿ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಆದಷ್ಟು ಬೇಗ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹಾನಿಗೊಳಗಾದವರಿಗೆ ಪರಿಹಾರ ಕಲ್ಪಿಸಿ ಕೊಡಬೇಕಾಗಿದೆ.
ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್, ಅಳ್ನಾವರ.
Kshetra Samachara
09/05/2022 04:09 pm