ಹುಬ್ಬ ಳ್ಳಿ: ಬುಧವಾರ ಹುಬ್ಬಳ್ಳಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿತ್ತು. ಸದ್ಯ ಇಂದು ಕೂಡಾ ಮಳೆಯಾರ್ಭಟ ಮುಮಂದುವರೆದಿದ್ದು ಹುಬ್ಬಳ್ಳಿ ಮಂದಿ ಹೈರಾಣಾಗಿದ್ದಾರೆ.
ಸದ್ಯ ಅಕಾಲಿಕ ಮಳೆಯಿಂದಾಗಿ ಹುಬ್ಬಳ್ಳಿ ಮಂದಿ ಆತಂಕಗೊಂಡಿದ್ದು ಬುಧವಾರ ಹುಬ್ಬಳ್ಳಿಗೆ ಕರಾಳದಿನವಾಗಿ ಪರಿಣಮಿಸಿದೆ. ಎಲ್ಲೆಂದರಲ್ಲಿ ಮರ ಬಿದ್ದು ವಾಹನ ಜಖಂಗೊಂಡಿದ್ದು, ಪ್ರಯಾಣಿಕನೊಬ್ಬ ಸಾವನ್ನಪ್ಪಿದ್ದು ಜನರ ಆತಂಕ ಮತ್ತಷ್ಟು ಹೆಚ್ಚಾಗಿದೆ. ಇಂದು ಕೂಡ ವರುಣನ ಆರ್ಭಟ ಜೋರಾಗಿದೆ.
ಆರಂಭದಲ್ಲಿಯೇ ದೊಡ್ಡ ಪ್ರಮಾಣದ ಗಾಳಿ ಬಿಸಿದ್ದು,ಮಳೆ ಆರಂಭಗೊಂಡ ಹಿನ್ನೆಲೆಯಲ್ಲಿ ಜನ ಮನೆಗಳತ್ತ ಕಾಲ್ಕಿತ್ತಿದ್ದಾರೆ. ಒಟ್ಟಿನಲ್ಲಿ ಮಳೆರಾಯನ ಆಟಕ್ಕೆ ಜನ ತತ್ತರಿಸಿ ಹೋಗಿದ್ದಂತೂ ಸುಳ್ಳಲ್ಲ.
Kshetra Samachara
05/05/2022 08:00 pm