ಹುಬ್ಬಳ್ಳಿ: ಬೇಸಿಗೆಯ ಬಿಸಿಲಿನ ಝಳಕ್ಕೆ ಬೆಂದು ಹೋಗಿದ್ದ ವಾಣಿಜ್ಯನಗರಿಯಲ್ಲಿ ವರುಣ ತಂಪೆರೆದಿದ್ದಾನೆ. ನಗರದೆಲ್ಲೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ.
ಗಾಳಿ, ಮಳೆ ಜೊತೆಗೆ ಆಲೆಕಲ್ಲು ಸಹಿತ ಮಳೆಯಾಗಿದೆ. ಏಕಾಏಕಿ ಸುರಿದ ಭಾರಿ ಮಳೆಗೆ ಜನಜೀವನದ ಅಸ್ತವ್ಯಸ್ತವಾಗಿದೆ. ಭಾರಿ ಮಳೆಗೆ ರಸ್ತೆಗಳು ತುಂಬಿ ಹರಿದವು. ನಗರದಾದ್ಯಂತ ಕಳೆದ ಅರ್ಧ ಗಂಟೆಯಿಂದ ಸುರಿಯುತ್ತಿದ್ದು, ಬಿಸಿಲಿನ ಝಳಕ್ಕೆ ಕಂಗೆಟ್ಟಿದ್ದ ಜನತೆಗೆ ವರುಣ ತಂಪರೆದಿದ್ದಾನೆ.
Kshetra Samachara
04/05/2022 07:48 pm