ಧಾರವಾಡ: ಕಳೆದ ಕೆಲವು ದಿನಗಳಿಂದ ಮಳೆರಾಯ ತನ್ನ ಆರ್ಭಟ ಮೆರೆಯುತ್ತಲೇ ಇದ್ದಾನೆ. ಮಧ್ಯಾಹ್ನದವರೆಗೂ ಬಿಸಿಲಿನ ವಾತಾವರಣ, ದೊಡ್ಡ ಪ್ರಮಾಣದಲ್ಲಿ ಸೆಖೆ ಕೂಡ ಇರುತ್ತದೆ. ಮಧ್ಯಾಹ್ನದ ನಂತರ ಆಕಾಶದಲ್ಲಿ ಕಪ್ಪಿಡುವ ಮೋಡಗಳು ಏಕಾಏಕಿ ಇಳೆಗೆ ತಂಪೆರೆಯುತ್ತವೆ.
ಸೋಮವಾರ ಕೂಡ ಸಂಜೆ ಹೊತ್ತಿಗೆ ಧಾರವಾಡದಲ್ಲಿ ಮಳೆರಾಯ ತಂಪನೆರೆದಿದ್ದಾನೆ. ಮೊದಲು ಗಾಳಿ ಬೀಸಿ ನಂತರ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.
Kshetra Samachara
25/04/2022 08:04 pm