ನವಲಗುಂದ: ತಾಲ್ಲೂಕಿನ ಹಾಲಕುಸುಗಲ ಗ್ರಾಮದಲ್ಲಿ ಗುರುವಾರ ಸಂಜೆ ಗಾಳಿ ಸಮೇತ ಭಾರಿ ಮಳೆಯಾಗಿದ್ದು, ಇದರಿಂದಾಗಿ ವಿದ್ಯುತ್ ಕಂಬಗಳು, ಮರಗಳು ನೆಲಕ್ಕಚ್ಚಿವೆ. ಇದರೊಂದಿಗೆ ಕೆಲವು ಮನೆಗಳಿಗೂ ಹಾನಿಯಾಗಿದೆ ಎನ್ನಲಾಗುತ್ತಿದೆ.
ಬೆಳಿಗ್ಗೆಯಿಂದ ಉರಿ ಬಿಸಿಲಿನಲ್ಲಿದ್ದ ಜನರಿಗೆ ಸಂಜೆ ವೇಳೆಗೆ ವರುಣರಾಯ ಪ್ರತ್ಯಕ್ಷವಾಗಿದ್ದು, ಹಾಲಕುಸುಗಲ ಗ್ರಾಮ ಸೇರಿದಂತೆ ತಾಲೂಕಿನ ಹಲವೆಡೆ ಭಾರಿ ಮಳೆಯಾಗಿದೆ. ಸರಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸುರಿದ ಮಳೆಗೆ ಹಾಲಕುಸುಗಲ ಗ್ರಾಮಲ್ಲಿ ವಿದ್ಯುತ್ ಕಂಬಗಳು ನೆಲಕಚ್ಚಿದ್ದರೆ, ಇನ್ನು ಕೆಲವು ಬಾಗಿವೆ, ಮರಗಳು ಬಿದ್ದಿವೆ.
Kshetra Samachara
24/03/2022 07:56 pm