ಹುಬ್ಬಳ್ಳಿ : ಮನೆಗೊಂದು ಮರ ಹಾಗೂ ಬಡಾವಣೆಗೊಂದು ವನ ಎಂಬ ಒಳ್ಳೆಯ ಸದುದ್ದೇಶದ ಕಾರ್ಯಕ್ರಮದ ಮೂಲಕ ಎಲ್ಲರಿಗೂ ಶುದ್ಧ ಆಮ್ಲಜನಕ ವಾಯು ಸಿಗುತ್ತದೆ, ಪರಿಸರ ಉಳಿಸಿ ಬೆಳೆಸುವ ಈ ಕಾರ್ಯಕ್ರಮ ಸೇರಿದಂತೆ ಹಲವಾರು ಸಾಮಾಜಿಕ ಕೆಲಸ ವಸುಂಧರಾ ಪೌಂಡೇಶನ್ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಅವರು ಇಂದು ನಗರದಲ್ಲಿ ನಡೆದ ಸ್ವರ್ಣಾ ಟೆಕ್ನೋ ಕನ್ಸಟ್ರಕ್ಷನ್ ಮತ್ತು ವಸುಂಧರಾ ಪೌಂಡೇಶನ್'ನ ಮನೆಗೊಂದು ಮರ ಹಾಗೂ ಬಡಾವಣೆಗೊಂದು ವನದ ಶ್ರೀ ಮಲ್ಲಿಕಾರ್ಜುನ ಉದ್ಯಾನವನ ನಿರ್ಮಾಣ ನಿರ್ವಹಣೆ ಮತ್ತು ವಸುಂಧರಾ ಪೌಂಡೇಶನ್'ಗೆ ಓಮಿನಿ ವಾಹನ ಹಸ್ತಾಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಡಾ.ಸಿಎಚ್ ವಿ.ಎಸ್.ವಿ ಪ್ರಸಾದ್ ಹಲವಾರು ವರ್ಷಗಳಿಂದ ಈ ರೀತಿ ವಿಭಿನ್ನ ಕಾರ್ಯಕ್ರಮ ಮಾಡುತ್ತಿದ್ದಾರೆ ಈ ಕಾರ್ಯಕ್ಕೆ ಯಶಸ್ಸು ಸಿಗಲಿ ಎಂದು ಪ್ರೋತ್ಸಾಹ ತುಂಬಿದರು.
ಬಳಿಕ ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್ ವತಿಯಿಂದ ವಸುಂಧರಾ ಪೌಂಡೇಶನ್'ಗೆ ಕೀ ಹಸ್ತಾಂತರ ಮಾಡುವ ಮೂಲಕ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್ ಉದ್ಯಮಿ ಡಾ.ಸಿಎಚ್. ವಿ.ಎಸ್.ವಿ ಪ್ರಸಾದ ವಾಹನ ನೀಡಿದರು.
ಕೋಟಿಲಿಂಗ ನಗರದ ಎಂ.ಸಿ ಪಾಟೀಲ ಬಡವಾಣೆಯಲ್ಲಿ ಶ್ರೀ ಮಲ್ಲಿಕಾರ್ಜುನ ಉದ್ಯಾನವನದ ಆವರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ಸ್ವರ್ಣಾ ಗ್ರೂಪ್ ಮಾಲೀಕ ವಿ.ಎಸ್.ವಿ ಪ್ರಸಾದ್ ಹಾಗೂ ವಸುಂಧರಾ ಪೌಂಡೇಶನ್ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Kshetra Samachara
25/12/2021 09:27 pm